ಬಾಲಿವುಡ್ ನ ಹಾಟ್ ಬೆಡಗಿ, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಬೆಡಗಿ ಕತ್ರಿನಾ ಕೈಫ್. 12 ಕ್ಕೂ ಹೆಚ್ಚು ದೇಶಗಳನ್ನು ಕತ್ರಿನಾ ಸುತ್ತಿ ಬಂದಿದ್ದಾಳೆ. ಆದರೆ ಕೈಫ್ ನ ಈ ಸತ್ಯ ತಿಳಿದ್ರೆ ನೀವೂ ಹುಬ್ಬೇರಿಸುತ್ತೀರಿ.
ದೇಶ ದೇಶ ಸುತ್ತಿ ಬಂದಿರುವ, ಬಾಲಿವುಡ್ ನಲ್ಲಿ ಮೆರೆಯುತ್ತಿರುವ ಕತ್ರಿನಾ ಕೈಫ್ ಶಾಲೆಗೆ ಹೋಗಿಲ್ಲ. ಇದು ಸತ್ಯ. ನಾವು ಜೋಕ್ ಮಾಡ್ತಾ ಇಲ್ಲ. 1983, ಜುಲೈ 16 ರಂದು ಜನಿಸಿರುವ ಕೈಫ್, ಶಾಲೆ ಮೆಟ್ಟಿಲನ್ನೇ ಹತ್ತಿಲ್ಲ.
7 ಸಹೋದರಿಯರು ಹಾಗೂ ಒಬ್ಬ ಸಹೋದರನನ್ನು ಹೊಂದಿರುವ ಕೈಫ್ ಚಿಕ್ಕವಳಿರುವಾಗಲೇ ತಂದೆ – ತಾಯಿಯ ಡೈವರ್ಸ್ ಆಗಿತ್ತು. ತಾಯಿಯ ಜೊತೆಯಲ್ಲಿ ಕೈಫ್ ದೊಡ್ಡವಳಾದಳು. ತಾಯಿ ಸಮಾಜ ಕಲ್ಯಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ದೇಶ ದೇಶ ಸುತ್ತ ಬೇಕಾಗಿತ್ತು. ಹಾಗಾಗಿ ಕೈಫ್ ಗೆ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಮನೆಯಲ್ಲಿಯೇ ವ್ಯಾಸಂಗ ಮಾಡಬೇಕಾಯ್ತು.
ಜಪಾನ್, ಚೈನಾ, ಫ್ರಾನ್ಸ್, ಸ್ವಿಜರ್ ಲ್ಯಾಂಡ್, ಪೋಲ್ಯಾಂಡ್, ಬೆಲ್ಜಿಯಂ, ಯುರೋಪ್ ನಲ್ಲಿ ಬಾಲ್ಯ ಕಳೆದ ಕತ್ರಿನಾ ಮತ್ತೆ ಇಂಗ್ಲೆಂಡ್ ಗೆ ಬಂದರು. ಮೂರು ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟರು. ತಮ್ಮ 14 ನೇ ವಯಸ್ಸಿನಲ್ಲಿ ಹವಾಯಿಯ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದಲ್ಲದೇ, ಜ್ಯುವೆಲರಿ ಕಂಪನಿಯಲ್ಲಿ ಮೊದಲ ಕೆಲಸ ಗಿಟ್ಟಿಸಿಕೊಂಡಳು.
ಭಾರತಿಯರಿಗೆ ತಾಯಿ ಹೆಸರನ್ನು ಉಚ್ಛಾರ ಮಾಡುವುದು ಕಷ್ಟ ಎಂಬ ಒಂದೇ ಕಾರಣಕ್ಕೆ ಕತ್ರಿನಾ ತಂದೆ ಹೆಸರನ್ನು ಇಟ್ಟುಕೊಂಡಿದ್ದಾರೆ. ಲಂಡನ್ ನಲ್ಲಿ ಮಾಡಲಿಂಗ್ ಮಾಡಿ ಬಂದ ಕತ್ರಿನಾಗೆ ಹಿಂದಿ ಉಚ್ಛಾರದ ಸಮಸ್ಯೆ ಎದುರಾಗಿತ್ತು.ಆದರೆ ಪಟ್ಟು ಬಿಡದ ಕತ್ರಿನಾ ಕ್ಲಾಸ್ ಗೆ ಹೋಗಿ ಹಿಂದಿ ಕಲಿತಿದ್ದಾಳೆ.