alex Certify ತೆಲುಗು ರಾಜ್ಯಗಳಲ್ಲೂ ‘ಕಾಂತಾರ’ ಅಬ್ಬರ: ವಾರಾಂತ್ಯ ದೀಪಾವಳಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಸರ್ದಾರ್’, ‘ಗಾಡ್‌ ಫಾದರ್’ಗಿಂತಲೂ ಅಧಿಕ ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲುಗು ರಾಜ್ಯಗಳಲ್ಲೂ ‘ಕಾಂತಾರ’ ಅಬ್ಬರ: ವಾರಾಂತ್ಯ ದೀಪಾವಳಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಸರ್ದಾರ್’, ‘ಗಾಡ್‌ ಫಾದರ್’ಗಿಂತಲೂ ಅಧಿಕ ಗಳಿಕೆ

ಹೈದರಾಬಾದ್: ದೀಪಾವಳಿ ವಾರಾಂತ್ಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

ಈ ಚಿತ್ರವು ಕಾರ್ತಿ ಅವರ ‘ಸರ್ದಾರ್’ ಮತ್ತು ವಿಷ್ಣು ಮಂಚು ಅವರ ‘ಗಿನ್ನಾ’ ಸೇರಿದಂತೆ ಹೊಸದಾಗಿ ಬಿಡುಗಡೆಯಾದ ಚಿತ್ರಗಳನ್ನೂ ಮೀರಿಸಿದೆ.

ದೀಪಾವಳಿ ವಾರಾಂತ್ಯದಲ್ಲಿ(ಸೆಪ್ಟೆಂಬರ್ 21-25), ‘ಕಾಂತಾರ’ ಆಂಧ್ರ ಮತ್ತು ತೆಲಂಗಾಣ ಬಾಕ್ಸ್ ಆಫೀಸ್‌ನಿಂದ 10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದ ಒಟ್ಟು ಕಲೆಕ್ಷನ್ ಎರಡು ರಾಜ್ಯಗಳಿಂದ 25 ಕೋಟಿ ರೂ.ಗಿಂತಲೂ ಅಧಿಕವೆನ್ನಲಾಗಿದೆ.

ಎರಡು ತೆಲುಗು ರಾಜ್ಯಗಳಿಂದ ಸುಮಾರು 8 ಕೋಟಿ ರೂಪಾಯಿ ಗಳಿಸುವ ಮೂಲಕ ಕಾರ್ತಿ ಅಭಿನಯದ ‘ಸರ್ದಾರ್’ ಎರಡನೇ ಸ್ಥಾನದಲ್ಲಿದೆ. ‘ಕಾಂತಾರ’ ಮತ್ತು ‘ಸರ್ದಾರ್’ ನಂತಹ ಡಬ್ಬಿಂಗ್ ಚಿತ್ರಗಳಿಗಿಂತ ಮೂಲತಃ ತೆಲುಗಿನಲ್ಲಿ ತಯಾರಾದ ‘ಒರಿ ದೇವುಡಾ’ ಕಡಿಮೆ ವ್ಯಾಪಾರವನ್ನು ಮಾಡಿದ್ದು, ಸುಮಾರು 6 ಕೋಟಿ ರೂ. ಗಳಿಸಿದೆ.

ದೀಪಾವಳಿ ಸಂದರ್ಭದಲ್ಲಿ ಆಂಧ್ರ ಮತ್ತು ತೆಲಂಗಾಣ ಬಾಕ್ಸ್ ಆಫೀಸ್ ನಲ್ಲಿ ಟಾಪ್ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಶಿವಕಾರ್ತಿಕೇಯನ್ ಅಭಿನಯದ ‘ರಾಜಕುಮಾರ’ ಐದನೇ ಸ್ಥಾನದಲ್ಲಿದ್ದು, ಸುಮಾರು 5 ಕೋಟಿ ರೂ. ಗಳಿಸಿದೆ. ಅಮೆರಿಕಾದ ಸೂಪರ್ ಹೀರೋ ಚಿತ್ರ ‘ಬ್ಲ್ಯಾಕ್ ಆಡಮ್’ ಆಂಧ್ರ ಮತ್ತು ತೆಲಂಗಾಣ ಬಾಕ್ಸ್ ಆಫೀಸ್ ನಲ್ಲಿ 1.7 ಕೋಟಿ ರೂ. ಕಲೆಕ್ಷನ್ ಮಾಡಿದೆ,

ನವರಾತ್ರಿಗೆ ಬಿಡುಗಡೆಯಾದ ಚಿರಂಜೀವಿ ಅವರ ‘ಗಾಡ್‌ಫಾದರ್’ ವಿಸ್ತೃತ ವಾರಾಂತ್ಯದಲ್ಲಿ 1 ಕೋಟಿ ರೂ. ಈ ಚಿತ್ರದ ಒಟ್ಟು ಕಲೆಕ್ಷನ್ 100 ಕೋಟಿ ರೂ.ಗೂ ಅಧಿಕ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...