ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್ಗಳನ್ನ ಮಾಡಿದ ಬಳಿಕ ಬಾಲಿವುಟ್ ನಟಿ ಕಂಗನಾ ರಣಾವತ್ರ ಖಾತೆಯನ್ನ ಟ್ವಿಟರ್ ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಟ್ವಿಟರ್ ವಕ್ತಾರ, ಹಿಂಸಾಚಾರಗಳಿಗೆ ಪುಷ್ಟಿ ನೀಡುವಂತಹ ನಿಮ್ಮ ನಡವಳಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ. ಆದರೆ ಕಂಗನಾ ರಣಾವತ್ರ ಟ್ವಿಟರ್ ಖಾತೆಯಲ್ಲಿ ಪದೇ ಪದೇ ನಿಯಮಗಳನ್ನ ಉಲ್ಲಂಘಿಸಲಾಗಿದೆ. ಈ ಕಾರಣದಿಂದಾಗಿ ಶಾಶ್ವತವಾಗಿ ಕಂಗನಾರ ಟ್ವಿಟರ್ ನಿಷ್ಕ್ರಿಯವಾಗಿದೆ ಎಂದು ಹೇಳಿದ್ದಾರೆ.
ಅಂದಹಾಗೆ ಕಂಗನಾ ಈ ರೀತಿ ವಿವಾದಾತ್ಮಕ ಪೋಸ್ಟ್ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದ್ದ ತಾಂಡವ್ ವೆಬ್ಸಿರೀಸ್ ವಿರುದ್ಧವೂ ಕಂಗನಾ ವಿವಾದಾತ್ಮಕ ಟ್ವೀಟ್ ಮಾಡಿದ್ದರು.
ಈ ವೇಳೆ ಟ್ವಿಟರ್ ವಕ್ತಾರ, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆ, ಇನ್ನೊಬ್ಬರ ಸಾವನ್ನ ಬಯಸುವುದು ಸೇರಿದಂತೆ ಇಂತಹ ನಿಯಮ ಉಲ್ಲಂಘಿಸುವ ಪೋಸ್ಟ್ಗಳನ್ನ ನಿರ್ಬಂಧಿಸಲಾಗುತ್ತೆ ಎಂದು ಹೇಳಿದ್ದರು.