
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸಹೋದರಿ ರಂಗೋಲಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವೇಳೆ ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಟ್ವಿಟರ್‌ನಲ್ಲಿ ವಿಚಾರ ಹಂಚಿಕೊಂಡ ಕಂಗನಾ, ತಮ್ಮ ಸಹೋದರಿಗೆ ನಾಯಿಮರಿಯೊಂದನ್ನು ಗಿಫ್ಟ್ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಸುಂದರವಾಗಿ ಸಿಂಗರಿಸಲಾದ ಬುಟ್ಟಿಯೊಂದರಲ್ಲಿ ನಾಯಿಮರಿಯನ್ನು ಗಿಫ್ಟ್ ಆಗಿ ಕೊಟ್ಟ ಕಂಗನಾ, ತಮ್ಮ ಸಹೋದರಿಯೊಂದಿಗೆ ಕುಳಿತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಕೆ ಬಳಿ ಅದಾಗಲೇ ಜರ್ಮನ್ ಸ್ಪಿಟ್ಝ್ ತಳಿಯ ನಾಯಿಮರಿಯೊಂದು ಇದೆ. ಅದರ ಹೆಸರು ಪ್ಲೂಟೋ.
