alex Certify ʼತಲೈವಿʼ ಬಗ್ಗೆ ಮಾತನಾಡಿದ್ದಾರೆ ನಟಿ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತಲೈವಿʼ ಬಗ್ಗೆ ಮಾತನಾಡಿದ್ದಾರೆ ನಟಿ ಕಂಗನಾ

ಮುಂಬೈ: ತಮಿಳುನಾಡಿನ ಸಿಎಂ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನದ ಕಥೆಯನ್ನಾಧರಿಸಿದ ʼತಲೈವಿʼ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.‌ ಜಯಲಲಿತಾ ಪಾತ್ರವನ್ನು ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡುತ್ತಿದ್ದಾರೆ.

ತಮ್ಮ ಪಾತ್ರಕ್ಕಾಗಿ ಅವರು ಭರತ ನಾಟ್ಯ ಕಲಿತಿದ್ದಾರೆ. 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೆನ್ನಿಗೆ ಪೆಟ್ಟು ಮಾಡಿಕೊಂಡು ಕೆಲ ದಿನ ತೊಂದರೆ ಅನುಭವಿಸಿದ್ದರು. ಆದರೆ, ಅದರಿಂದ ತಮಗೇನೂ ನಷ್ಟವಾಗಿಲ್ಲ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂಬ ಸಮಾಧಾನ ತಮಗಿದೆ ಎಂದು ಕಂಗನಾ ಹೇಳಿದ್ದಾರೆ.‌

ತಮ್ಮ ತಲೈವಿ ಪಾತ್ರದ ಫೋಟೋಗಳನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.‌ “ಭಾರತೀಯ ಚಿತ್ರರಂಗದ ಮೊದಲ ಸೂಪರ್ ಹ್ಯೂಮನ್ ಗರ್ಲ್ ಪಾತ್ರವನ್ನು ನಾನು ಮಾಡಿದ್ದೇನೆ. 30 ರ ಹರೆಯದಲ್ಲೂ ಈ ಎಲ್ಲ ಸವಾಲುಗಳನ್ನು ಎದುರಿಸಲು ಸಹಕಾರ ನೀಡಿದ ನನ್ನ ದೇಹಕ್ಕೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.

“ನನ್ನ ಹಳೆಯ ಫಿಟ್ ನೆಸ್ ಗೆ ಬರುವುದು ಸುಲಭದ ವಿಷಯವಲ್ಲ. ಈ 7 ತಿಂಗಳು ನನ್ನಲ್ಲಿ ಹಿಂದಿನ ಸ್ಟೆಮಿನಾ ಇರಲಿಲ್ಲ. ಆದರೂ ಉತ್ತಮವಾಗಿದ್ದೇನೆ.‌ಈಗ ಐದು ಕೆಜಿ ಇಳಿದಿದ್ದೇನೆ‌. ನಿರ್ದೇಶಕ ವಿಜಯ ಅವರು ತಲೈವಿ ಫುಟೇಜ್ ತೋರಿಸಿದ್ದು, ಉತ್ತಮವಾಗಿ ಬಂದಿದೆ” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...