ಬಾಲಿವುಡ್ ನಟ ಸುಶಾಂತ್ ಅಸಹಜ ಸಾವಿನ ಬಳಿಕ ಟೀಕೆಗಳಿಂದಲೇ ಸಂಚಲನ ಸೃಷ್ಟಿಸಿರುವ ನಟಿ ಕಂಗನಾ, ನಟಿ ದೀಪಿಕಾ ವಿರುದ್ಧ ಪರೋಕ್ಷವಾಗಿ ಅಸಹನೆ ಮುಂದುವರಿಸಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ನೆಪಮಾಡಿಕೊಂಡು ‘ಜಡ್ಜ್ ಮೆಂಟಲ್ ಹೈ ಕ್ಯಾ’ ವೀಕ್ಷಿಸಿ ಎಂದು ಕುಟುಕಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆಯಲ್ಲಿ ತಮ್ಮ ಚಿತ್ರದ ಕ್ಲಿಪ್ ಒಂದನ್ನು ಟ್ವೀಟ್ ಮಾಡಿರುವ ಕಂಗನ ಮಾನಸಿಕ ಆರೋಗ್ಯದ ಬಗ್ಗೆ ಕೆಲ ಸಾಲು ಬರೆದಿದ್ದಾರೆ.
ಹಾಗೆಯೇ ‘ದೋಸ್ ಹೂ ರನ್ ಡಿಪ್ರೆಶನ್ ಕಿ ದುಕಾನ್’ ಎಂದು ದೀಪಿಕಾರನ್ಮು ಉದ್ದೇಶಿಸಿ ಕಿಚಾಯಿಸಿದ್ದಾರೆ. ಆರಂಭದಲ್ಲಿ ಚಿತ್ರಕ್ಕೆ ಮೆಂಟಲ್ ಹೇ ಕ್ಯಾ ಎಂದು ಹೆಸರಿಡಲಾಗಿತ್ತು. ಆದರೆ ಮಾನಸಿಕ ಅಸ್ವಸ್ಥರಿಗೆ ಅವಮಾನಕರ ಮತ್ತು ಅವಹೇಳನಕಾರಿ ಎಂದು ಭಾವಿಸಿ ಆಕ್ಷೇಪ ಬಂದ ಹಿನ್ನೆಲೆ ಜಡ್ಜ್‌ಮೆಂಟಲ್ ಹೈ ಕ್ಯಾ ಎಂದು ಮರು ನಾಮಕರಣ ಮಾಡಲಾಗಿತ್ತು.