ಟ್ವಿಟ್ಟರ್ ನಲ್ಲಿ 21ನೇ ವಯಸ್ಸಿನಲ್ಲಿ ನಾನೇನಾಗಿದ್ದೆ ಎಂಬ ಸವಾಲು ಶುರು ಮಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ತಮ್ಮ ಜೀವನದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ನಾನು ಕಷ್ಟದಲ್ಲಿದ್ದಾಗ ಅಪ್ಪ ನನ್ನ ಸಹಾಯಕ್ಕೆ ಬರಲಿಲ್ಲ. 15ನೇ ವಯಸ್ಸಿಗೆ ಮನೆ ಬಿಟ್ಟೆ. 16ನೇ ವಯಸ್ಸಿನಲ್ಲಿ ಅಂಡರ್ ವರ್ಲ್ಡ್ ಮಾಫಿಯಾ ನನ್ನನ್ನು ಹಿಡಿದಿಟ್ಟು. 21ನೇ ವಯಸ್ಸಿನಲ್ಲಿ ನನ್ನ ಜೀವನದ ಎಲ್ಲ ಖಳರನ್ನು ಹೊಡೆದು ತಪ್ಪಿಸಿಕೊಂಡು ಬಂದಿದ್ದೆ. ರಾಷ್ಟ್ರೀಯ ಪುರಸ್ಕಾರ ಪಡೆಯುವಷ್ಟರ ಮಟ್ಟಿಗೆ ಯಶಸ್ವಿ ನಟಿಯಾಗಿ ಬೆಳೆದೆ. ಮುಂಬೈನ ಬಾಂದ್ರಾದಲ್ಲಿ ಸ್ವಂತ ಸಂಪಾದನೆಯಲ್ಲಿ ಮನೆ ಮಾಡಿದೆ.
ಬಿಡುಗಡೆಯಾಯ್ತು ‘ರಾಬರ್ಟ್’ ಚಿತ್ರದ ಟ್ರೈಲರ್: ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿಯಿಂದ ವೀಕ್ಷಣೆ
ಹೀಗೆ ತಮ್ಮನ್ನು ತಾವು ಹೊಗಳಿಕೊಂಡ ಕಂಗನಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಖಲಿಸ್ಥಾನದ ಪರ ಹೋರಾಟಕ್ಕೆ ಪರೋಕ್ಷ ಕುಮ್ಮಕ್ಕು ಕೊಟ್ಟ ಆರೋಪದಡಿ ಬಂಧಿತಳಾಗಿರುವ 21ವರ್ಷದ ದಿಶಾ ರವಿಗೆ ಬಿಸಿ ಮುಟ್ಟಿಸಲು ಹೋದ ನಟಿ ಕಂಗನಾಗೆ ನೆಟ್ಟಿಗರು ಚಳಿ ಬಿಡಿಸಿದ್ದಾರೆ.
https://twitter.com/badasserybitch/status/1361252618958299136?ref_src=twsrc%5Etfw%7Ctwcamp%5Etweetembed%7Ctwterm%5E1361252618958299136%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fkangana-ranaut-says-she-was-captured-by-underworld-mafia-at-16-recalls-squashing-all-villains-534385.html