![Kangana Ranaut says, 'Priyanka Chopra has gone from nationalist to secular puppy' | Hindi Movie News - Times of India](https://static.toiimg.com/photo/msid-84093806/84093806.jpg?98472)
ರಾಜಕೀಯ ಸಿದ್ಧಾಂತವಾದದ ಸಮರಕ್ಕೆ ಸಿನೆಮಾ ಸೆಲೆಬ್ರಿಟಿಗಳು ಇಳಿಯುವುದು ಹೊಸ ವಿಚಾರವೇನಲ್ಲ. ಬಾಲಿವುಡ್‌ನ ಕಂಗನಾ ರಣಾವತ್ ದೇಶದ ರಾಜನೀತಿಯ ಬಗ್ಗೆ ಯಾವಾಗಲೂ ಮಾತನಾಡುತ್ತಾ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು.
ಕಂಗನಾ ಇದೀಗ ಬಾಲಿವುಡ್‌ನ ಮತ್ತೊಬ್ಬ ನಟಿ ಪ್ರಿಯಾಂಕಾ ಚೋಪ್ರಾ ಕುರಿತು ಮಾತನಾಡಿ, ಆಕೆಯ ರಾಜಕೀಯ ನಿಲುವಿನ ಬಗ್ಗೆ ಕಾಮೆಂಟ್ ಮಾಡುತ್ತಾ, “ಇದು ಬರೀ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ, ಎಲ್ಲಾ ಕ್ಷೇತ್ರದಲ್ಲೂ ಇದೆ. ರಾಷ್ಟ್ರವಾದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಜಾತ್ಯಾತೀತವಾದಿಯಾಗಿದ್ದಾರೆ. ಮೋದಿ ಜೀ ಅವರ ಅತಿ ದೊಡ್ಡ ಅಭಿಮಾನಿಯಾಗಿದ್ದ ಅವರೀಗ ಮೋದಿಯವರ ದ್ವೇಷಿ ಹಾಗೂ ಟೀಕಾಕಾರಿಣಿಯಾಗಿದ್ದಾರೆ. ತುತ್ತಿಗಾಗಿ ಇಡೀ ಜಗತ್ತೇ ಕುಣಿಯುತ್ತದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯವೇನೋ ಇದೆ. ಏನು ಮಾಡಬೇಕೋ ಅದನ್ನೆಲ್ಲಾ ಮಾಡಿ” ಎಂದಿದ್ದಾರೆ.
ಅಬ್ಬಬ್ಬಾ….! ದಂಗಾಗಿಸುತ್ತೆ ಪ್ರತಿ ಇನ್ಸ್ಟಾ ಪೋಸ್ಟ್ಗೆ ಭಾರತೀಯ ಸೆಲೆಬ್ರಿಟಿಗಳು ಪಡೆಯುವ ಸಂಭಾವನೆ
ದೇಶದ ಮುಂಚೂಣಿ ದೈನಿಕವೊಂದು, ’ವ್ಯವಸ್ಥೆಯ-ವಿರುದ್ಧ’ದ ಕರೆಸ್ಪಾಂಡಂಟ್ ಒಬ್ಬರು ಬೇಕೆಂದು ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಹೀಗೆ ಹೇಳಿದ್ದಾರೆ.