ಮಂಜಿನಿಂದ ಆವೃತವಾದ ಮನೆ ಫೋಟೋ ಹಂಚಿಕೊಂಡ ನಟಿ ಕಂಗನಾ 26-11-2020 5:17PM IST / No Comments / Posted In: Latest News, Entertainment ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಈ ಬಾರಿ ಮನಾಲಿಯಲ್ಲಿರುವ ತಮ್ಮ ನಿವಾಸದ ಸುಂದರವಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಚಳಿಗಾಲದ ಹಿನ್ನೆಲೆ ಮನಾಲಿಯಲ್ಲಿರುವ ಈಕೆಯ ಮನೆ ಮಂಜಿನಿಂದ ಆವೃತವಾಗಿದ್ದು ಸಿಕ್ಕಾಪಟ್ಟೆ ಚೆನ್ನಾಗಿ ಕಾಣುತ್ತಿದೆ. ಸದ್ಯ ಹೈದರಾಬಾದ್ನಲ್ಲಿರುವ ನಟಿ ಕಂಗನಾ ಈ ಫೋಟೋವನ್ನ ಶೇರ್ ಮಾಡಿ, ಮನಾಲಿಯಲ್ಲಿರುವ ನಮ್ಮ ಮನೆಯ ಫೋಟೋ ಇಂದು ಬೆಳಗ್ಗೆಯಷ್ಟೇ ನೋಡಿದೆ. ಮನಾಲಿಯಲ್ಲಾದ ಈ ವರ್ಷದ ಮೊದಲ ಮಂಜಿನ ಮಳೆ ಇದು ಅಂತಾ ಬರೆದುಕೊಂಡಿದ್ದಾರೆ. ಥಲೈವಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ನಟಿ ಕಂಗನಾ, ಕೆಲ ದಿನಗಳ ಹಿಂದಷ್ಟೇ ತಮ್ಮ ತವರಿನಿಂದ ಹೈದರಾಬಾದ್ಗೆ ತೆರಳುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ರು. Received some chilling pictures of my house from my caretakers ha ha here’s a glimpse of first snow fall in Manali this morning ❄️ pic.twitter.com/3FX4ADKbtg — Kangana Ranaut (Modi Ka Parivar) (@KanganaTeam) November 26, 2020