
ದೇಶದಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಳಿಕ ಹಲವು ವಾದ – ವಿವಾದಗಳು ಶುರುವಾಗಿದೆ. ಇದೀಗ ಈ ವಿವಾದಕ್ಕೆ ನಾಸಿರುದ್ದೀನ್ ಶಾ ಹಾಗೂ ಕಂಗನಾ ರಣಾವತ್ ವಿವಾದವೂ ಸೇರಿಕೊಂಡಿದೆ.
ಹೌದು, ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕ, ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ನಾಸಿರುದ್ದೀನ್ ಶಾ, ಸುಶಾಂತ್ ಸಿಂಗ್ ಪ್ರಕರಣವನ್ನು ಇಟ್ಟುಕೊಂಡು ಕೆಲವರು ಇಂಡಸ್ಟ್ರಿಯಲ್ಲಿ ಮೆರೆಯಲು ಬಯಸುತ್ತಿದ್ದಾರೆ. ಯಾರ ಹೆಸರನ್ನು ಹೇಳದಿದ್ದರೂ, ಅರ್ಧಬರ್ಧ ಕಲಿತಿರುವ ಒಬ್ಬರು ಸುಶಾಂತ್ ಸಾವಿನ ಪ್ರಕರಣದಲ್ಲಿ ಬಹಳ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಈ ಮಾತನ್ನು ಆಡುತ್ತಿದ್ದಂತೆ ಕಂಗನಾ ರಣಾವತ್ ತಂಡ, ಈ ಮಾತನ್ನು ನಮಗೆ ಹೇಳುತ್ತಿರುವಿರೇ…? ಒಂದು ವೇಳೆ ಆಕೆ ಸ್ಟಾರ್ ನಟರ ಮಗಳಾಗಿದ್ದರೆ, ಈ ರೀತಿ ಹೇಳುತ್ತಿದ್ದಿರೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೆಟ್ಟಿಗರು ವಾದ- ಪ್ರತಿವಾದ ಮಂಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
https://twitter.com/ashokepandit/status/1295916919015395328?ref_src=twsrc%5Etfw%7Ctwcamp%5Etweetembed%7Ctwterm%5E1295916919015395328%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fkangana-ranaut-fans-roast-naseeruddin-shah-for-calling-her-half-educated-starlet-2801421.html
https://twitter.com/Ivinitvijayan/status/1295667934975660033?ref_src=twsrc%5Etfw%7Ctwcamp%5Etweetembed%7Ctwterm%5E1295667934975660033%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fkangana-ranaut-fans-roast-naseeruddin-shah-for-calling-her-half-educated-starlet-2801421.html