ಬಾಲಿವುಡ್ ನಟಿ ಕಂಗನಾ ರಣಾವತ್ರ ಮುಂಬರುವ ಸಿನಿಮಾ ʼತಲೈವಿʼ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಸಿನಿಮಾ ಟ್ರೈಲರ್ ವಿಚಾರವಾಗಿ ಕಂಗನಾ ರಣಾವತ್ ಟ್ವಿಟರ್ನಲ್ಲಿ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ.
ಸಿನಿಮಾ ಟ್ರೇಲರ್ ಸಂಬಂಧ ಟ್ವೀಟ್ ಮಾಡಿರುವ ನಟಿ ಕಂಗನಾ, ನನಗೆ ಅಕ್ಷಯ್ ಕುಮಾರ್ರಂತಹ ದೊಡ್ಡ ದೊಡ್ಡ ನಟರು ಕರೆ ಹಾಗೂ ಮೆಸೇಜ್ ಮಾಡಿ ಹೊಗಳುತ್ತಿದ್ದಾರೆ ಎಂದು ಹೇಳಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ರ ಸಿನಿಮಾಗಳಂತೆ ನನ್ನ ಸಿನಿಮಾವನ್ನ ಬಹಿರಂಗವಾಗಿ ಹೊಗಳೋದಿಲ್ಲ. ರಹಸ್ಯವಾಗಿ ಕರೆ ಹಾಗೂ ಸಂದೇಶದ ಮೂಲಕ ನನ್ನ ಪಾತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೆಲ್ಲಾ ಮೂವಿ ಮಾಫಿಯಾ ಭಯೋತ್ಪಾದನೆ ಎಂದು ಟ್ವೀಟಾಯಿಸಿದ್ದಾರೆ.
ಕಲೆಯ ವಿಚಾರಕ್ಕೆ ಬಂದಾಗ ಸಿನಿಮಾ ಇಂಡಸ್ಟ್ರಿ ವಸ್ತುನಿಷ್ಠವಾಗಿ ಇರಬೇಕಿತ್ತು. ಸಿನಿಮಾ ವಿಚಾರದಲ್ಲಿ ರಾಜಕೀಯ ಬರಲೇಬಾರದು. ನನ್ನ ರಾಜಕೀಯ ದೃಷ್ಟಿಕೋನ ಹಾಗೂ ಸಿದ್ಧಾಂತಗಳಿಂದಾಗಿ ಸಿನಿರಂಗದಲ್ಲಿ ನನಗೆ ಬೆದರಿಕೆ ಹಾಕುವ, ಕಿರುಕುಳ ನೀಡುವ ಹಾಗೂ ನನ್ನನ್ನ ಪ್ರತ್ಯೇಕವಾಗಿ ಕಾಣಬಾರದು. ಒಂದು ವೇಳೆ ಅವರು ಈ ರೀತಿ ಮಾಡಿದ್ರೆ ಖಂಡಿತವಾಗಿಯೂ ಆಗ ನಾನು ಗೆಲ್ಲುತ್ತೇನೆ ಎಂದು ಬರೆದಿದ್ದಾರೆ.
ಕಂಗನಾ ರಣಾವತ್ ತಮಿಳುನಾಡಿನ ಹಿರಿಯ ನಟಿ ಹಾಗೂ ರಾಜಕಾರಣಿ ಜಯಲಲಿತಾರ ಆತ್ಮಕತೆ ಆಧಾರಿತ ಸಿನಿಮಾ ʼತಲೈವಿʼ ಮೂಲಕ ಜನರ ಮುಂದೆ ಬರೋಕೆ ರೆಡಿಯಾಗ್ತಿದ್ದಾರೆ. ಈ ಸಿನಿಮಾದ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ.