
ತಮ್ಮ ಮುಂಬರುವ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದ ಹಾಗೆ ಈ ಸಿನಿಮಾ ಇಂದಿರಾ ಗಾಂಧಿ ಆತ್ಮಚರಿತ್ರೆಯಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ ಸಂದರ್ಭದಲ್ಲಿ ಹಾಗೂ ಆಪರೇಷನ್ ಬ್ಲೂಸ್ಟಾರ್ ಸಂದರ್ಭದ ಕೆಲ ಸನ್ನಿವೇಶಗಳನ್ನ ಆಧರಿಸಿ ಈ ಸಿನಿಮಾ ನಿರ್ಮಾಣವಾಗ್ತಿದೆ ಎಂದು ಕಂಗನಾ ಹೇಳಿದ್ದಾರೆ.
ಫಿಲ್ಮ್ ಚೇಂಬರ್ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಗಳೇನು….?
ಹೌದು…..ನಾವು ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ. ಸಿನಿಮಾದ ಕತೆ ಕೊನೆಯ ಹಂತದಲ್ಲಿದೆ. ಇದು ಇಂದಿರಾ ಗಾಂಧಿಯ ಆತ್ಮಕತೆಯಲ್ಲ. ಆದರೆ ಅವರ ಕಾಲಘಟ್ಟದಲ್ಲಿ ದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಕತೆಯನ್ನ ಹೊಂದಿದೆ. ಈ ಸಿನಿಮಾದ ಮೂಲಕ ನಮ್ಮ ಪೀಳಿಗೆಯ ಜನರು ದೇಶದ ರಾಜಕಾರಣವನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಕಂಗನಾ ಹೇಳಿದ್ದಾರೆ.