ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ.
ಅದರಲ್ಲೂ ಈ ವಿಚಾರವಾಗಿ ನಟಿ ಕಂಗಾನಾ ರಣಾವತ್ ಕೂಡ ಮಧ್ಯಪ್ರವೇಶಿಸಿದ್ದು, ಸುಶಾಂತ್ ಗೆ ಆದ ಗತಿ ತನಗೂ ಆದರೆ ಅಚ್ಚರಿಯಿಲ್ಲ. ಬಾಲಿವುಡ್ ನಲ್ಲಿನ ಸ್ವಜನ ಪಕ್ಷಪಾತಕ್ಕೆ ಇನ್ನೆಷ್ಟು ಬಲಿಯಾಗಬೇಕೋ ಎಂದು ಆತಂಕ ವ್ಯಕ್ತಪಡಿಸಿದ್ದರು.
ಅಷ್ಟೇ ಅಲ್ಲದೆ, ಸುಶಾಂತ್ ರದ್ದು ಸಹಜ ಸಾವಲ್ಲ ಎಂಬ ಅನುಮಾನಗಳಿದ್ದು, ಈ ಸಾವಿಗೆ ನ್ಯಾಯ ಸಿಗಬೇಕೆಂಬ ಅನೇಕರ ಕೂಗಿಗೆ ಕಂಗನಾ ಮುಖ್ಯ ಧ್ವನಿಯಾಗಿದ್ದಾರೆ.
ಕಂಗನಾ ಅವರ ಈ ಪ್ರಯತ್ನಕ್ಕೆ ತಾಪ್ಸಿ ಪನ್ನು, ರಿಚಾ ಚಾಂದ್, ಸ್ವರ ಭಾಸ್ಕರ್ ಸೇರಿ ಹಲವರು ಅಡ್ಡಿಪಡಿಸುತ್ತಲೇ ಇದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಒದಗಿಸುವ ಚರ್ಚೆ ಬಂದಾಗಲೆಲ್ಲಾ ಈ ಮೂವರು ವಿಷಯಾಂತರ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ ಎಂಬ ಆರೋಪಗಳಿವೆ.
ಏತನ್ಮಧ್ಯೆ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಅಧಿಕೃತವಾಗಿ ನಿರ್ವಹಿಸುವ ಟೀಮ್, ಹೊಸದಾಗಿ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲೂ ತಾಪ್ಸಿ, ರಿಚಾ ಹಾಗೂ ಸ್ವರ ವಿರುದ್ಧ ವಾಗ್ದಾಳಿ ನಡೆಸಿದೆ.
https://twitter.com/RichaChadha/status/1284821488068001798?ref_src=twsrc%5Etfw%7Ctwcamp%5Etweetembed%7Ctwterm%5E1284821488068001798%7Ctwgr%5E&ref_url=https%3A%2F%2Fwww.news18.com%2Fnews%2Fmovies%2Fkangana-ranaut-accuses-taapsee-pannu-richa-chadha-swara-bhasker-of-trying-best-to-deviate-from-sushant-singh-rajputs-topic-2724243.html