![](https://kannadadunia.com/wp-content/uploads/2021/01/DAWN_pic.jpg)
ಬಲಗಾಲಿನ ಮೂಳೆಯಲ್ಲಿ ಸೋಂಕು ಉಂಟಾಗಿದ್ದರಿಂದ ಕಮಲ್ ಹಾಸನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರ, ಟಿಬಿಯಲ್ ಮೂಳೆಯಲ್ಲಿನ ಸೋಂಕನ್ನ ಸರಿಪಡಿಸಲು ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದೆವು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ಕಮಲ್ ಹಾಸನ್ ಚೇತರಿಸಿಕೊಳ್ತಿದ್ದಾರೆ ಎಂದು ಹೇಳಿದೆ. ಕಮಲ್ ಹಾಸನ್ರ ಹೆಲ್ತ್ ಬುಲೆಟಿನ್ಗೆ ಎಸ್ಆರ್ಎಂಸಿಯ ವೈದ್ಯಕೀಯ ನಿರ್ದೇಶಕ ಡಾ. ಸುಹಾಸ್ ಪ್ರಭಾಕರ್ ಸಹಿ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಕಮಲ್ ಹಾಸನ್ ಮಕ್ಕಳಾದ ನಟಿ ಶೃತಿ ಹಾಸನ್ ಹಾಗೂ ಅಕ್ಷರಾ ಹಾಸನ್, ನಮ್ಮ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇನ್ನೊಂದು ನಾಲ್ಕೈದು ದಿನಗಳಲ್ಲಿ ಅವರು ಮನೆಗೆ ಹಿಂದಿರುಗಲಿದ್ದಾರೆ ಎಂದು ಹೇಳಿದ್ರು.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಕಾಲಿನಲ್ಲಿ ನೋವು ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆಗಾಗಿ ಪ್ರಚಾರದಿಂದ ಕೊಂಚ ವಿರಾಮ ತೆಗೆದುಕೊಳ್ತಿರೋದಾಗಿ ಜನವರಿ 17ರಂದು ಮಾಹಿತಿ ನೀಡಿದ್ದರು.