
ಗುರುವಾರದಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟಿ ಕಾಜೋಲ್‌ರನ್ನು ಅಭಿನಂದಿಸಲು ಅವರ ಜೂಹೂ ನಿವಾಸದ ಬಳಿ ಅಭಿಮಾನಿಗಳು ನೆರೆದಿದ್ದರು. ಮೆಚ್ಚಿನ ನಟಿಗಾಗಿ ಹುಟ್ಟುಹಬ್ಬದ ಕೇಕ್ ಅನ್ನೂ ತಂದಿದ್ದರು ಫ್ಯಾನ್ಸ್.
ಮನೆಯೊಳಗೆ ಹೋಗಬೇಕಿದ್ದ ವೇಳೆ ಕಾಜೋಲ್ ಅಭಿಮಾನಿಗಳು ತಂದ ಕೇಕ್ ಅನ್ನು ಕತ್ತರಿಸಿದ್ದಾರೆ. ಆದರೆ ಆ ವೇಳೆ ಅವರು ಅಷ್ಟೇನೂ ಉತ್ಸಾಹ ತೋರಿಲ್ಲ.
ನಾಳೆಯೇ SSLC ಫಲಿತಾಂಶ ಪ್ರಕಟ…..?
ತಮಗಾಗಿ ಅಷ್ಟು ಆಸೆಯಿಂದ ಬಂದಿದ್ದ ಅಭಿಮಾನಿಗಳಿಗೆ ಧಿಮಾಕಿನ ವರ್ತನೆ ತೋರಿದ ಕಾಜೋಲ್ ವರ್ತನೆ ಸರಿಯಿಲ್ಲ ಎಂದು ಟೀಕಿಸಿರುವ ನೆಟ್ಟಿಗರಲ್ಲಿ ಒಬ್ಬರು, “ಈ ನಟರಿಗಾಗಿ ಜನರೇಕೆ ತಮ್ಮ ಸಮಯ ವ್ಯರ್ಥ ಮಾಡುತ್ತಾರೆ ? ಆ ಕೇಕ್‌ಗೆ ಕಾಜೋಲ್ ಬೆಲೆಯನ್ನೇ ಕೊಡಲಿಲ್ಲ” ಎಂದಿದ್ದಾರೆ.
“ತನ್ನನ್ನು ಈ ಮಟ್ಟಕ್ಕೆ ತಂದಿದ್ದೇ ಈ ಜನರೆಂದು ಕಾಜೋಲ್ ಮರೆತಂತಿದ್ದಾರೆ. ತಾನೇನೋ ಅವರಿಗೆ ಉಪಕಾರ ಮಾಡುತ್ತಿರುವವರಂತೆ ಆಕೆ ವರ್ತಿಸುತ್ತಿದ್ದಾರೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
https://www.youtube.com/watch?v=CtGBtBGOXTg
https://www.instagram.com/p/CSLY4TTCdKo/?utm_source=ig_web_copy_link