ಸಿಯೋಲ್: ದಕ್ಷಿಣ ಕೊರಿಯಾದ ಸುಪ್ರಸಿದ್ಧ ಬಿಟಿಎಸ್ ಬ್ಯಾಂಡ್ ಆನ್ ಲೈನ್ ನಲ್ಲಿ ಹೊಸ ದಾಖಲೆ ಬರೆದಿದೆ. ಬ್ಯಾಂಡ್ ವರ್ಚುವಲ್ ವೇದಿಕೆಯಲ್ಲಿ ಪ್ರದರ್ಶಿಸಿದ ಪಾಪ್ ಹಾಡುಗಳಿಗೆ ವಿಶ್ವಾದ್ಯಂತ 100 ಮಿಲಿಯನ್ ಗೂ ಅಧಿಕ ಅಭಿಮಾನಿಗಳಾಗಿದ್ದಾರೆ.
ಕೊರೊನಾ ಕಾರಣದಿಂದ ಬಿಟಿಎಸ್ ಬ್ಯಾಂಡ್ ಯೋಜಿಸಿದ್ದ ವಿಶ್ವ ಪ್ರವಾಸ ರದ್ದಾಗಿತ್ತು. ಕೋವಿಡ್ ಬಿಗು ಮಾನದಂಡಗಳಿಂದ ಸ್ಥಳೀಯವಾಗಿಯೂ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ಬ್ಯಾಂಡ್ ಏಳು ಜನರನ್ನು ಸೇರಿಸಿಕೊಂಡು ವರ್ಚುವಲ್ ವೇದಿಕೆಯಲ್ಲಿ “ಮ್ಯಾಪ್ ಆಫ್ ದ ಸೋಲ್ ಒನ್” ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಅದು ಬಹು ಬೇಗ ಪ್ರಸಿದ್ಧವಾಯಿತು. ಪ್ರದರ್ಶನದ ಸಂದರ್ಭದಲ್ಲಿ ಹಿಂದೆ ಸ್ಕ್ರೀನ್ ಇಡಲಾಗಿತ್ತು. ಅಲ್ಲಿ ಲೈವ್ ವೀಕ್ಷಕರ ಫೋಟೋ ಹಾಗೂ ಅವರ ಕಮೆಂಟ್ ಗಳು ಬರುತ್ತಿದ್ದವು.
ಬಿಟಿಎಸ್ ಬ್ಯಾಂಡ್ ಮೊದಲು ಕೋರಿಯನ್ ಪಾಪ್ ಹಾಡುಗಳನ್ನು ಮಾತ್ರ ಮಾಡುತ್ತಿತ್ತು. 2013 ರಿಂದ ಇಂಗ್ಲಿಷ್ ನಲ್ಲಿ ಪಾಪ್ ಹಾಡುಗಳನ್ನು ಹಾಡಲು ಪ್ರಾರಂಭಿಸಿತು. ಅಂದಿನಿಂದ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಕೊರೊನಾ ಕಾರಣದಿಂದ ಆನ್ ಲೈನ್ ಬಳಕೆ ಇನ್ನಷ್ಟು ಹೆಚ್ಚಿದ್ದು, ಬಿಟಿಎಸ್ ಕೆ.ಪಾಪ್ ಪ್ರಖ್ಯಾತಿ ಇನ್ನೂ ಹೆಚ್ಚಿದೆ.