ಮೀರಾಬಾಯಿ ಚಾನು ಅನುಕರಣೆ ಮಾಡಿ ಎಲ್ಲರ ಮನ ಗೆದ್ದ ಪುಟಾಣಿ ಬಾಲಕಿ 28-07-2021 7:54AM IST / No Comments / Posted In: Featured News, Entertainment ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಸಂಪಾದಿಸಿದ ಮೀರಾಬಾಯಿ ಚಾನು ಲಕ್ಷಾಂತರ ಯುವತಿಯರಿಗೆ ಮಾದರಿ ಎನಿಸಿದ್ದಾರೆ. ಮೀರಾಬಾಯಿ ಸಾಧನೆಯಿಂದ ಖುಷ್ ಆದ ಪುಟಾಣಿ ಅಭಿಮಾನಿಯೊಬ್ಬಳು ಮೀರಾಬಾಯಿಗೆ ವಿಶೇಷ ವಿಡಿಯೋವೊಂದನ್ನ ಅರ್ಪಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ನಾಲ್ಕು ವರ್ಷ ಪ್ರಾಯವೂ ಅಲ್ಲವೇನೋ ಎನಿಸುವಂತಹ ಪುಟ್ಟ ಬಾಲಕಿಯೊಬ್ಬಳು ಮೀರಾಬಾಯಿ ಚಾನುರಂತೆಯೇ ವೇಟ್ ಲಿಫ್ಟ್ ಮಾಡುವಂತೆ ನಟನೆ ಮಾಡಿದ್ದಾಳೆ. ಹಿಂಬದಿಯಲ್ಲಿ ಟಿವಿ ಪರದೆ ಮೇಲೆ ಮೀರಾಬಾಯಿ ಭಾರ ಎತ್ತುವ ದೃಶ್ಯ ಪ್ರಸಾರವಾಗ್ತಿದ್ರೆ ಮುಂದೆ ಈ ಬಾಲಕಿ ಥೇಟ್ ಮೀರಾಬಾಯಿಯಂತೆಯೇ ನಟಿಸಿದ್ದಾಳೆ. ಈ ವಿಡಿಯೋ ಎಷ್ಟು ಮುದ್ದಾಗಿ ಮೂಡಿ ಬಂದಿದೆ ಅಂದರೆ ಸ್ವತಃ ಮೀರಾಬಾಯಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. Junior @mirabai_chanu this s called the inspiration pic.twitter.com/GKZjQLHhtQ — sathish sivalingam weightlifter (@imsathisholy) July 26, 2021