ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಇಂದು ಮಹತ್ವದ ದಿನ. ಈ ದಿನ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ. ಅಶ್ಲೀಲ ಚಿತ್ರ ನಿರ್ಮಾಣ ವಿಷ್ಯದಲ್ಲಿ ರಾಜ್ ಕುಂದ್ರಾ ಜೈಲಿನಲ್ಲಿದ್ದು, ಇಂದು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಇತ್ತ 14 ವರ್ಷಗಳ ನಂತ್ರ ಶಿಲ್ಪಾ ಶೆಟ್ಟಿ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ-2 ಚಿತ್ರ ಡಿಸ್ನಿ ಹಾಟ್ಸ್ಟಾರ್ ನಲ್ಲಿ ಬಿಡುಗಡೆಯಾಗಿದೆ. ಅನೇಕ ವರ್ಷಗಳ ನಂತ್ರ ಸಿನಿಮಾಕ್ಕೆ ಬಣ್ಣ ಹಚ್ಚಿರುವ ಶಿಲ್ಪಾ ಈ ಬಗ್ಗೆ ಉತ್ಸುಕರಾಗಿದ್ದರು. ಆದ್ರೆ ಚಿತ್ರ ಬಿಡುಗಡೆ ಹತ್ತಿರವಾಗ್ತಿದ್ದಂತೆ ಪತಿ ರಾಜ್ ಕುಂದ್ರಾ ವಿಷ್ಯ ಚರ್ಚೆಗೆ ಬಂದಿತ್ತು. ರಾಜ್ ಕುಂದ್ರಾ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ಪತಿಯ ಬಂಧನದ ನಂತ್ರ ಶಿಲ್ಪಾ ಸಾಮಾಜಿಕ ಜಾಲತಾಣದಿಂದ ದೂರವಿದ್ದಾರೆ. ಸೂಪರ್ ಡಾನ್ಸರ್ ಶೋನಲ್ಲಿಯೂ ಶಿಲ್ಪಾ ಕಾಣಿಸಿಕೊಂಡಿಲ್ಲ. ಶಿಲ್ಪಾ, ಸಿನಿಮಾದ ಪ್ರಚಾರವನ್ನೂ ಸರಿಯಾಗಿ ಮಾಡಿಲ್ಲ.
ಇದಕ್ಕೂ ಮೊದಲು ಚಿತ್ರದ ಬಗ್ಗೆ ಮಾತನಾಡಿದ್ದ ಶಿಲ್ಪಾ, ಹಂಗಾಮಾ-2 ಚಿತ್ರದ ಕಥೆ ಕೇಳಿ ತುಂಬಾ ನಕ್ಕಿದ್ದೆ. ನಾನು ಇಂಥ ಚಿತ್ರದಲ್ಲಿ ನಟಿಸಲು ಯಾವಾಗ್ಲೂ ಉತ್ಸುಕಳಾಗಿದ್ದೆ ಎಂದು ಶಿಲ್ಪಾ ಹೇಳಿದ್ದರು. 14 ವರ್ಷಗಳ ನಂತ್ರ ಮತ್ತೆ ತೆರೆಗೆ ಬಂದಿರುವ ಶಿಲ್ಪಾರನ್ನು ಅಭಿಮಾನಿಗಳು ಅಪ್ಪಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.