ನವದೆಹಲಿ: ದೇಶದಲ್ಲಿ 5 ಜಿ ವೈರ್ ಲೆಸ್ ನೆಟ್ವರ್ಕ್ ಸ್ಥಾಪಿಸುವುದರ ವಿರುದ್ಧ ನಟಿ ಜೂಹಿ ಚಾವ್ಲಾ ಹೂಡಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, 20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಮೊಕದ್ದಮೆ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿಯಾಗಿದೆ ಎಂದು ಆಕ್ಷೇಪಿಸಿದೆ.
ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆನ್ಲೈನ್ ವೆಬ್ ಲಿಂಕ್ ವಿಚಾರಣೆ ವೇಳೆ ಅಪರಿಚಿತರು ಜನರಿಂದ ಅಡಚಣೆ ಉಂಟಾಗಿದೆ. ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿದ್ದು, ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ದೆಹಲಿ ಪೊಲೀಸರು ಗುರುತಿಸಿ ಕ್ರಮಕೈಗೊಳ್ಳಬೇಕೆಂದು ಕೋರ್ಟ್ ಸೂಚಿಸಿದೆ.
ಕಾನೂನಿನ ಪ್ರಕ್ರಿಯೆನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಜೂಹಿಚಾವ್ಲಾ ಗೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅರ್ಜಿ ವಜಾಗೊಳಿಸಲಾಗಿದೆ.