ಜೋದ್ಫುರದ 18 ವರ್ಷದ ಹುಡುಗ, ಬಾಬಾ ಜಾಕ್ಸನ್ ಖ್ಯಾತಿಯ ಯುವರಾಜ್ ಸಿಂಗ್ ‘Entertainer No 1’ ಶ್ರೇಯಕ್ಕೆ ಪಾತ್ರನಾಗಿದ್ದು, ಒಂದು ಕೋಟಿ ರೂ.ಗಳ ಬಹುಮಾನ ಗೆದ್ದುಕೊಂಡಿದ್ದಾನೆ.
ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಆಯೋಜಿಸಿದ್ದ ‘stay at home’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಈತ. ಎಂಟು ವಾರಗಳ ಕಾಲ ನಡೆದ ಈ ಶೋವನ್ನು ವರುಣ್ ಧವನ್ ಆಯೋಜಿಸಿದ್ದರು.
ಟೈಲ್ ಫಿಟ್ಟಿಂಗ್ ಕೆಲಸ ಮಾಡುವ ಸಿಂಗ್‌ರ ತಂದೆ, ತಮ್ಮ ಮಗನ ಈ ಪ್ರದರ್ಶನದಿಂದ ಬಹಳ ಖುಷಿಯಾಗಿದ್ದಾರೆ. ಮೈಕೆಲ್ ಜಾಕ್ಸನ್ ಅಭಿಮಾನಿಯಾಗಿರುವ ಈತ ಹಿಂದಿಯ ಕೆಲ ಲೆಜೆಂಡರಿ ಹಾಡುಗಳಿಗೆ ಹೆಜ್ಜೆ ಹಾಕುವುದನ್ನು ಬಹಳ ಎಂಜಾಯ್ ಮಾಡುತ್ತಾನೆ.