
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಪೋಲಿಸ್ ಗೌರವದೊಂದಿಗೆ ಜಯಂತಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಅವರ ಪುತ್ರ ಕೃಷ್ಣಕುಮಾರ್ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು. ಇಂದು ಬೆಳಗಿನ ಜಾವ ಅಗಲಿದ ನಟಿಯ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಆಪ್ತರು, ಸಿನಿಮಾ ರಂಗದವರು ಭಾಗಿಯಾಗಿದ್ದಾರೆ. ಕಲಾವಿದರು, ಅಭಿಮಾನಿಗಳು ಜಯಂತಿಯವರ ಅಂತಿಮ ದರ್ಶನ ಪಡೆದ ನಂತರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕನ್ನಡ ಚಿತ್ರರಂಗದ ಗಣ್ಯರು, ರಾಜಕೀಯ ರಂಗದ ಗಣ್ಯರು, ಜಯಂತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.