ಕೋವಿಡ್-19 ಲಾಕ್‌ಡೌನ್ ಬಳಿಕ ಅನೇಕ ದೇಶಗಳಲ್ಲಿ ಸಿನಿಮಾ ಮಂದಿರಗಳು ಮತ್ತೆ ಆರಂಭಗೊಂಡಿವೆ. ಆದರೂ ಸಹ ಸೋಂಕಿನ ಕಾರಣದಿಂದ ಥಿಯೇಟರ್‌ಗಳಿಗೆ ಜನರು ಬರುವುದು ಬಹಳ ಕಡಿಮೆಯಾಗಿದೆ.
ಬಹುತೇಕ ದೇಶಗಳಲ್ಲಿ ಸಿನಿಮಾ ಮಂದಿರಗಳಲ್ಲಿ ಅವುಗಳ 50% ಸಾಮರ್ಥ್ಯದಷ್ಟು ಪ್ರೇಕ್ಷಕರನ್ನು ಕೂರಿಸಿ ಶೋ ಹಾಕಲು ಅನುವು ಮಾಡಿಕೊಡಲಾಗಿದೆ. ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರಂಗಳ ಮೂಲಕ ಹೊಸ ರಿಲೀಸ್ ಸಿನಿಮಾಗಳಲ್ಲಿ ಮೊಬೈಲ್/ಲ್ಯಾಪ್‌ಟಾಪ್‌ಗಳಲ್ಲಿ ನೋಡಬಹುದಾದರೂ ಸಹ ಬಹಳಷ್ಟು ಮಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮಜವೇ ಬೇಕು.
ಕಣ್ಣೆದುರೇ ತಂದೆ ಸಾವು: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಯುವತಿಯ ಆಕ್ರೋಶ
ಜಪಾನ್‌ನ ಏಯಾನ್ ಸಿನಿಮಾಸ್ ಥಿಯೇಟರ್ ಪ್ರಿಯರಿಗೆಂದೇ ವಿಶೇಷವಾದ ವ್ಯವಸ್ಥೆಯೊಂದನ್ನು ಮಾಡಿಕೊಂಡಿದೆ. ಸಾಮಾಜಿಕ ಅಂತರ ಖಾತ್ರಿ ಪಡಿಸಲು ಸೀಟುಗಳನ್ನು ಪರಸ್ಪರ 1.5 ಮೀಟರ್‌ನಷ್ಟು ಅಂತರದಲ್ಲಿ ಇಡಲಾಗಿದ್ದು, ಮಧ್ಯದಲ್ಲಿ ಮರದ ಹಲಗೆಗಳನ್ನು ಬಳಸಿಕೊಂಡು ಪ್ರತ್ಯೇಕಿಸಲಾಗಿದೆ.
“ಈ ಸೀಟುಗಳು ನಿಮಗೆ ಖಾಸಗಿ ಕೋಣೆಯಲ್ಲಿ ಕುಳಿತು ಸಿನಿಮಾ ನೋಡುವ ಫೀಲ್ ಕೊಡಲಿದ್ದು, ಪರದೆಯನ್ನು ಇನ್ನಷ್ಟು ಗಹನವಾಗಿ ನೋಡುತ್ತಾ, ಅಕ್ಕಪಕ್ಕ ಏನಾಗುತ್ತಿದೆ ಎಂದು ತಲೆಕೆಡಿಸಿಕೊಳ್ಳದೇ ಶೋ ಎಂಜಾಯ್ ಮಾಡಬಹುದು. ನೀವು ಇನ್ನಷ್ಟು ಸುರಕ್ಷಿತ ಹಾಗೂ ಆರಾಮದಾಯಕ ವಾತಾವರಣದಲ್ಲಿ ಸಿನಿಮಾ ವೀಕ್ಷಿಸುವಂತೆ ಮಾಡುವುದು ನಮ್ಮ ಆಶಯ. ಇದನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಿದ್ದೇವೆ” ಎಂದು ಏಯಾನ್ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.