alex Certify ಮದುವೆ ವಿಚಾರವಾಗಿ ಇಂಟ್ರಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ವಿಚಾರವಾಗಿ ಇಂಟ್ರಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​..!

ಸೆಲೆಬ್ರಿಟಿಗಳ ಮದುವೆ ಅಂದರೆ ಸಾಕು ವಿಜೃಂಭಣೆಯಿಂದ ಕೂಡಿರುತ್ತೆ. ವಿವಾಹ ಮಹೋತ್ಸವ ನಡೆಯುವ ಸ್ಥಳ, ಸೆಲೆಬ್ರಿಟಿ ದಂಪತಿ ಫೋಟೋ ಇವನ್ನೆಲ್ಲ ನೋಡೋದೇ ಅಭಿಮಾನಿಗಳ ಕಣ್ಣಿಗೆ ಪರಮಾನಂದವೆನಿಸುತ್ತೆ.

ಇದೀಗ ಬಾಲಿವುಡ್​ ನಟಿ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ತಮ್ಮ ಕನಸಿನ ಮದುವೆ ಕಾರ್ಯಕ್ರಮ ಹೇಗಿರಬೇಕು ಅನ್ನೋದನ್ನ ರಿವೀಲ್​ ಮಾಡಿದ್ದಾರೆ. ಅಂದಹಾಗೆ ಇವರೇನು ಸದ್ಯ ಮದುವೆಯಾಗೋ ಆಲೋಚನೆಯಲ್ಲಿಲ್ಲ. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ತಮ್ಮ ಮದುವೆ ಹೀಗೆ ನಡೀಬೇಕು ಅನ್ನೋದನ್ನ ಹೇಳಿದ್ರು.

ಬ್ಯಾಚುಲರ್​ ಪಾರ್ಟಿ ಹಾಗೂ ಸರಳ ಮದುವೆ ತಮಗೆ ಸಾಕು ಎಂದಿದ್ದಾರೆ ನಟಿ ಜಾನ್ವಿ ಕಪೂರ್​. ದಕ್ಷಿಣ ಇಟಲಿಯ ಕ್ಯಾಪ್ರಿ ದ್ವೀಪದಲ್ಲಿ ಹಡಗಿನಲ್ಲಿ ವಿಹಾರ ಮಾಡುತ್ತಾ ಬ್ಯಾಚುಲರ್ ಪಾರ್ಟಿ ಮಾಡೋದು ಜಾನ್ವಿ ಕಪೂರ್​ರ ಕನಸಂತೆ.

ಅಲ್ಲದೇ ತಮ್ಮ ಮೆಹಂದಿ ಹಾಗೂ ಸಂಗೀತ್​ ಕಾರ್ಯಕ್ರಮವನ್ನು ಚೆನ್ನೈನ ಮೈಲಾಪುರದಲ್ಲಿರುವ ತಾಯಿ ಶ್ರೀದೇವಿ ನಿವಾಸದಲ್ಲಿ ಆಯೋಜಿಸೋದು ಹಾಗೂ ಸರಳ ವಿವಾಹ ಕಾರ್ಯ ತಿರುಪತಿಯಲ್ಲಿ ನಡೆಯಬೇಕು ಅನ್ನೋದು ಜಾನ್ವಿ ಕಪೂರ್​ ಅಭಿಲಾಷೆಯಾಗಿದೆ.

ಮಲ್ಲಿಗೆ ಹಾಗೂ ಮೇಣದಬತ್ತಿಯನ್ನು ಬಳಸಿ ಅತ್ಯಂತ ಸರಳ ಹಾಗೂ ಸುಂದರವಾಗಿ ಕಲ್ಯಾಣ ಮಂಟಪವನ್ನು ಸಿಂಗರಿಸಿದ್ರೆ ಸಾಕು ಅಂದ್ರು ನಟಿ ಜಾನ್ವಿ ಕಪೂರ್​..!

ಹಾಗಾದರೆ ಆರತಕ್ಷತೆ ಕಾರ್ಯಕ್ರಮ ಹೇಗೆ ನಡೆಯಬೇಕು ಎಂದು ಕೇಳಲಾದ ಪ್ರಶ್ನೆಗೆ ರಿಸೆಪ್ಷನ್​ ಮಾಡಿಕೊಳ್ಳಲೇಬೇಕು ಎಂದೇನಿಲ್ಲವಲ್ಲ ಎಂದು ಹೇಳಿದ್ರು. ಕೇವಲ 2 ದಿನಗಳಲ್ಲಿ ವಿವಾಹ ಕಾರ್ಯಕ್ರಮವನ್ನು ಮುಗಿಸೋದು ಜಾನ್ವಿ ಕಪೂರ್​ಗೆ ಇಷ್ಟವಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...