
ಬಾಲಿವುಡ್ ನಟಿ ಜಾಹ್ನವಿ ಕಪೂರ್ ರೂಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೂಹಿ ಚಿತ್ರ ತೆರೆಗೆ ಬಂದಿದ್ದು, ಜಾಹ್ನವಿ ಚಿತ್ರದ ಪ್ರಚಾರ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜಾಹ್ನವಿ ಪ್ರಚಾರದ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಿದ್ದಾರೆ.
ಈ ಮಧ್ಯೆ ಜಾಹ್ನವಿ ಕಾರಿನಲ್ಲಿರುವ ಫೋಟೋ ವೈರಲ್ ಆಗಿದೆ. ಜಾಹ್ನವಿ ಕಾರಿನಲ್ಲಿಯೇ ಬಟ್ಟೆ ಬದಲಿಸುತ್ತಿದ್ದಾರೆ. ಅದ್ರ ಫೋಟೋ ಹಂಚಿಕೊಮಡಿರುವ ಜಾಹ್ನವಿ, ಈಗ ನೆಮ್ಮದಿಯಾಯ್ತು ಎಂದು ಶೀರ್ಷಿಕೆ ಹಾಕಿದ್ದಾರೆ. ವಾಸ್ತವವಾಗಿ ಜಾಹ್ನವಿ, ಚಿತ್ರ ಪ್ರಚಾರಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗ್ತಿದ್ದಾರೆ. ಇದೇ ಕಾರಣಕ್ಕೆ ಆಗಾಗ ಬಟ್ಟೆ ಬದಲಿಸುವುದು ಅನಿವಾರ್ಯವಾಗಿದೆ. ಕಾರ್ಯಕ್ರಮವೊಂದಕ್ಕೆ ಜಾಹ್ನವಿ ಶಾರ್ಟ್ ಡ್ರೆಸ್ ಧರಿಸಿದ್ದರು. ಈ ಡ್ರೆಸ್ ನಲ್ಲಿ ಅವರು ಸುಂದರವಾಗಿ ಕಾಣ್ತಿದ್ದರು. ಕಾರ್ಯಕ್ರಮ ಮುಗಿಸಿ ಕಾರು ಹತ್ತಿದ ಜಾಹ್ನವಿ ಅಲ್ಲಿಯೇ ಆರಾಮದಾಯಕ ಬಟ್ಟೆ ಧರಿಸಿದ್ದಾರೆ. ಇದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈವರೆಗೆ 4 ಲಕ್ಷಕ್ಕೂ ಹೆಚ್ಚು ಕಮೆಂಟ್ ಬಂದಿದೆ.
‘ರಾಬರ್ಟ್’ ಭರ್ಜರಿ ಓಪನಿಂಗ್: ಮುಗಿಲುಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ
ವಿಮಾನದಲ್ಲಿರುವ ಇನ್ನೊಂದು ಫೋಟೋವನ್ನು ಕೂಡ ಜಾಹ್ನವಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜಾಹ್ನವಿ ರೂಹಿ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಜೊತೆ ನಟಿಸಿದ್ದಾರೆ.