
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಪೋಸ್ಟರ್ ನಾಳೆ ಬಿಡುಗಡೆಯಾಗಲಿದೆ.
ಜೇಮ್ಸ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾಗಿದ್ದು, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ನಟಿಸಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ, ಕಿಶೋರ್ ಪತ್ತಿಕೊಂಡ ನಿರ್ಮಾಣದ ‘ಜೇಮ್ಸ್’ ವಿಶೇಷ ಪೋಸ್ಟರ್ ನಾಳೆ ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಅನಾವರಣಗೊಳ್ಳಲಿದೆ.