ಬೆಂಗಳೂರು: ‘ಜೇಮ್ಸ್’ ಸಿನಿಮಾ ವಿವಾದದ ಬಗ್ಗೆ ಫಿಲಂ ಚೇಂಬರ್ ನೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಟ ಶಿವರಾಜಕುಮಾರ್ ಅವರೊಂದಿಗೂ ಕೂಡ ಮಾತನಾಡಿದ್ದೇನೆ. ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತರುವಂತೆ ಹೇಳಿದ್ದೇನೆ. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಸರಿಪಡಿಸಲು ಸೂಚನೆ ನೀಡಿದ್ದೇನೆ. ಅನಗತ್ಯವಾಗಿ ಸಿನಿಮಾ ಮಂದಿರಗಳಿಂದ ‘ಜೇಮ್ಸ್’ ಚಿತ್ರವನ್ನು ತೆಗೆಯುವಂತಿಲ್ಲ ಎಂದರು.
ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ. ನೀವೇ ಇದನ್ನು ಸರಿಪಡಿಸಬೇಕು ಎಂದು ಹೇಳಿದ್ದೇನೆ. ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸುತ್ತಿದ್ದಾರೆ ಎನ್ನುವುದೆಲ್ಲ ಸುಳ್ಳು ಎಂದು ಸಿಎಂ ಹೇಳಿದ್ದಾರೆ.
‘ದಿ ಕಾಶ್ಮೀರಿ ಫೈಲ್ಸ್’ ಚಿತ್ರಕ್ಕಾಗಿ ‘ಜೇಮ್ಸ್’ ಎತ್ತಂಗಡಿ ಮಾಡಲಾಗುತ್ತಿದೆ. ಬಿಜೆಪಿ ಶಾಸಕರು ಥಿಯೇಟರ್ ಗಳಿಂದ ‘ಜೇಮ್ಸ್’ ತೆಗೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು.