
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸಂಬಂಧಿಸಿದ ಹೊಸ ಫೋಟೋ ಲೀಕ್ ಆಗಿದ್ದು, ಚಿತ್ರದಲ್ಲಿ ವಂಚನೆ ಆರೋಪದ ಮೇಲೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರಿಂದ ಕಿಸ್ ಪಡೆದಿದ್ದಾರೆ,
ಜಾಕ್ವೆಲಿನ್ ಫರ್ನಾಂಡೀಸ್ ಅವರು ಕಾನ್ ಮ್ಯಾನ್ ಸುಖೇಶ್ ಚಂದ್ರಶೇಖರ್ ಜೊತೆ ವಿವಾದಕ್ಕೆ ಸಿಲುಕಿದ್ದಾರೆ. ಸುಕೇಶ್ ಭಾಗಿಯಾದ 200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ತನಿಖೆಯ ಸಮಯದಲ್ಲಿ. ನಟಿ ಜಾಕ್ವೆಲಿನ್ ಅವರನ್ನೂ ವಿಚಾರಣೆಗೆ ಕರೆಯಲಾಗಿತ್ತು. ಜಾಕ್ವೆಲಿನ್ ಆತನೊಂದಿಗೆ ಸಂಬಂಧ ನಿರಾಕರಿಸಿದರೆ, ಸುಕೇಶ್ ನಟಿಯೊಂದಿಗಿನ ಸಂಬಂಧ ಒಪ್ಪಿಕೊಂಡಿದ್ದರು.
ಈ ನಡುವೆ ಜಾಕ್ವೆಲಿನ್ ಮತ್ತು ಸುಕೇಶ್ ಅವರ ಹೊಸ ಚಿತ್ರವು ಆನ್‌ಲೈನ್ ನಲ್ಲಿ ಬಹಿರಂಗವಾಗಿದೆ. ಜೋಡಿಯು ನಿಕಟ ಕ್ಷಣವನ್ನು ಹಂಚಿಕೊಳ್ಳುವುದನ್ನು ಫೋಟೋದಲ್ಲಿ ಕಾಣಬಹುದು. ಚಿತ್ರದಲ್ಲಿ, ಸುಕೇಶ್ ಅವರು ಕ್ಯಾಮೆರಾಗೆ ಪೋಸ್ ನೀಡುವಾಗ ಜಾಕ್ವೆಲಿನ್ ಅವರನ್ನು ಮುದ್ದಾಡುತ್ತಿದ್ದರು ಮತ್ತು ಚುಂಬಿಸುತ್ತಿದ್ದರು. ಜಾಕ್ವೆಲಿನ್ ಸಹ ಫೋಟೋದಲ್ಲಿ ತನ್ನ ಪ್ರತಿಕೆಯೆ ತೋರಿಸಿದ್ದಾರೆ.
ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಒಟ್ಟಿಗೆ ಇರುವ ಚಿತ್ರ ಅಂತರ್ಜಾಲದ ಗಮನ ಸೆಳೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಜಾಕ್ವೆಲಿನ್ ಅವರು ಸುಕೇಶ್ ಅವರನ್ನು ಚುಂಬಿಸುತ್ತಿರುವಾಗ ಕನ್ನಡಿ ಸೆಲ್ಫಿಗೆ ಪೋಸ್ ನೀಡಿದ ಚಿತ್ರವೂ ವೈರಲ್ ಆಗಿತ್ತು.
ಸುಕೇಶ್ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಅವರ ವಿರುದ್ಧ ಒಟ್ಟು 15 ಎಫ್‌ಐಆರ್‌ಗಳು ದಾಖಲಾಗಿವೆ. ಅವರು ಜಾಕ್ವೆಲಿನ್ ಗೆ ಹಲವಾರು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ನಾನು ಜಾಕ್ವೆಲಿನ್ ಜೊತೆ ಸಂಬಂಧ ಹೊಂದಿದ್ದೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ನಡೆದ ಯಾವುದೇ ರೀತಿಯ ವಹಿವಾಟು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು. ಮತ್ತು ಉಡುಗೊರೆಗಳಲ್ಲಿ ಬಳಸಲಾದ ಯಾವುದೇ ಮೊತ್ತವು ಯಾವುದೇ ಆದಾಯದ ಭಾಗವಾಗಿಲ್ಲ. ನ್ಯಾಯಾಲಯ ಅದನ್ನು ನಿರ್ಧರಿಸುತ್ತದೆ. ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸುಕೇಶ್ ಹೇಳಿದ್ದು, ಅವರ ಪರವಾಗಿ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದರು.