ಬಾಲಿವುಡ್ ನಲ್ಲಿ ಈಗ ನೆಪೊಟಿಸಂ ಚರ್ಚೆ ನಡೆದಿದೆ. ಆದರೆ, “ಸ್ವಜನ ಪಕ್ಷಪಾತದಿಂದ ನನಗೆ ಎಂದೂ ತೊಂದರೆಯಾಗಿಲ್ಲ. ಹೊಸ ಆಫರ್ ಗಳು ಸಿಗುತ್ತಲೇ ಇವೆ” ಎಂದು ಚಿತ್ರರಂಗದ ಅತಿ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
“ಫಿಲ್ಮ್ ಇಂಡಸ್ಟ್ರಿ ಎಂಬುದು ಅತ್ಯಂತ ಸುಂದರ ವಂಚನೆ ಇದ್ದಂತೆ ಎಂಬುದನ್ನು ಅರಿತಿದ್ದೇನೆ. ಯಾವುದೇ ಹಿನ್ನೆಲೆಯಿಂದ ಬಾರದ ನಾನು ಇಲ್ಲಿ 10 ವರ್ಷದಿಂದ ಇದ್ದೇನೆ. ನಾವು ಎದುರು ಏನು ಮಾಡುತ್ತೇವೆ ಅದು ಸತ್ಯವಲ್ಲ, ಅದು ಕೇವಲ ಶೋ ಅಪ್ ಮಾತ್ರಕ್ಕೆ. ಹಾಗೆ ಮಾಡಲೂ ಒಂದು ಕೌಶಲ್ಯ ಬೇಕು. ನೀವು ಉತ್ತಮ ಟ್ಯಾಲೆಂಟ್ ಹಾಗೂ ಹಾರ್ಡ್ ವರ್ಕ್ ಮಾಡುವ ವ್ಯಕ್ತಿಯಾಗಿದ್ದರೆ, ನೀವು ಇಂಡಸ್ಟ್ರಿಗೂ, ಜನರಿಗೂ ಬೇಕಾದವರಾಗುತ್ತೀರಿ ಎಂಬುದನ್ನು ನಾನು ಕಲಿತಿದ್ದೇನೆ. ಇಂಡಸ್ಟ್ರಿಯಲ್ಲಿ ಜನರ ವ್ಯಕ್ತಿಯಾಗಿ ಇರುವುದು ಕಷ್ಟದ ಕೆಲಸ. ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್ ನೀವು ಜನರೊಟ್ಟಿಗೆ ಹೇಗೆ ಕಮ್ಯುನಿಕೇಟ್ ಮಾಡುತ್ತೀರಿ, ಹೇಗೆ ಇರುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಒಂದು ಚಿತ್ರ ನಿರ್ಮಾಣ ಎಂಬುದು ಒಬ್ಬ ವ್ಯಕ್ತಿಯ ಕೆಲಸವಲ್ಲ. ನೂರಾರು ಜನರ ಶ್ರಮ ಇದರಲ್ಲಿ ಇರುತ್ತದೆ. ಅವರೊಟ್ಟಿಗೆ ಕೆಲಸ ಮಾಡುವುದನ್ನು ಕಲಿಯಬೇಕು. ನಾನು ಹೇಳುವುದೇನೆಂದರೆ ಕಮ್ಯುನಿಕೇಶನ್ ಸ್ಕಿಲ್ ಬೆಳೆಸಿಕೊಳ್ಳಬೇಕು. ನೆಪೊಟಿಸಂನಿಂದ ನನಗೇನೂ ತೊಂದರೆಯಾಗಿಲ್ಲ. ಏಕೆಂದರೆ, ನಾನಿನ್ನೂ ಕೆಲಸ ಮಾಡುತ್ತಿದ್ದೇನೆ. ನಾನು ಮಾಡಲು ಇಷ್ಟಪಡುವ ಕೆಲಸಗಳು ಸಿಗದೇ ಇರಬಹುದು. ಆದರೆ ಕೆಲಸ ಸಿಗುತ್ತಿದೆ” ಎಂದಿದ್ದಾರೆ.
ನಾನು ನೆಪೊಟಿಸಂ ವಿರೋಧಿಯಲ್ಲ. ಆದರೆ, ಫೆವರೇಟಿಸಂನಿಂದ ನನಗೆ ಬೇಸರವಾಗುತ್ತದೆ. ಭಾರತದಲ್ಲಿರುವ ಕಾಸ್ಟಿಸಂನಿಂದಲೂ ಸಹ. ಆದರೆ, ಇವು ವಿದೇಶಗಳಲ್ಲಿ ಇಲ್ಲ ಎಂದು ಜಾಕ್ವೆಲಿನ್ ಹೇಳಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಇದೆ ಎಂಬುದಾದರೆ ಅದು ಎರಡನೇ ದರ್ಜೆಯ ಆ್ಯಕ್ಟರ್ ಗಳಿಂದ ಮಾತ್ರ. ಕೆಲವರು ತಮ್ಮವರೊಟ್ಟಿಗೆ ಚಿತ್ರ ನಿರ್ಮಾಣ ಮಾಡುತ್ತಾರೆ ಎಂದಾದರೆ, ಅದರ ಬಗ್ಗೆ ನಾವೇನೂ ಮಾಡಬೇಕು ಎಂದೆನಿಸುವುದಿಲ್ಲ ಎಂದಿದ್ದಾರೆ.