![Is Mouni Roy Engaged? Actress Flaunts Large Diamond Rock on Her Ring Finger in New Pic](https://images.news18.com/ibnlive/uploads/2020/10/1603954432_mouni-roy-1.jpg?impolicy=website&width=534&height=356)
ಹಿಂದಿ ಕಿರುತೆರೆ ಲೋಕದಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿ ಖ್ಯಾತಿ ಗಳಿಸಿರೋ ಮೌನಿ ರಾಯ್ ಎಂಗೇಜ್ಮೆಂಟ್ ಆಗಿದ್ದಾರೆ ಎಂಬ ವದಂತಿ ಹರಿದಾಡ್ತಿದೆ . ಇದಕ್ಕೆ ಕಾರಣ ಅವರು ಇತ್ತೀಚಿಗಷ್ಟೇ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಂ ಫೋಟೋ.
ವಜ್ರದ ಉಂಗುರವನ್ನ ಧರಿಸಿರುವ ಮೌನಿ ರಾಯ್ ಈ ಫೋಟೋವನ್ನ ಶೇರ್ ಮಾಡಿದ್ದಾರೆ.
ಇದು ನಿಶ್ಚಿತಾರ್ಥದ ಉಂಗುರಗಳ ಬ್ರ್ಯಾಂಡ್ ಜಾಹೀರಾತಾಗಿದ್ದರೂ ಸಹ ನೆಟ್ಟಿಗರು ಮೌನಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂತಲೇ ಭಾವಿಸಿದ್ರು .
ನಟಿ ಸ್ಮೃತಿ ಖನ್ನಾ, ಸಿಮ್ರನ್ ಕೌರ್ ಸೇರಿದಂತೆ ಹಲವರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು ನಿಮ್ಮ ಕ್ಯಾಪ್ಶನ್ ಓದುವವರೆಗೂ ನಾವು ನಿಮ್ಮ ಎಂಗೇಜ್ಮೆಂಟ್ ಆಗಿದೆ ಅಂತಾನೇ ಭಾವಿಸಿದ್ವಿ ಅಂತಾ ಕಮೆಂಟ್ ಮಾಡಿದ್ದಾರೆ.