ಬಾಲಿವುಡ್‌ನ ಸಖತ್ ಹಾಟ್ ಲವ್ ಸ್ಟೋರಿಯಾಗಿರುವ ರಣಬೀರ್ ಕಪೂರ್-ಆಲಿಯಾ ಭಟ್ ಪ್ರಣಯವು ಮದುವೆಯಲ್ಲಿ ಅಂತ್ಯವಾಗಲಿದೆ ಎಂಬ ಗುಮಾನಿಗಳು ಬಲವಾಗುತ್ತಿವೆ.
ಈ ಕುರಿತಾಗಿ ಖುದ್ದು ಪ್ರತಿಕ್ರಿಯೆ ಕೊಟ್ಟಿರುವ ಆಲಿಯಾ ಭಟ್, “ನಾನು ಯಾವಾಗ ಮದುವೆಯಾಗುತ್ತೇನೆ ಎಂದು ಎಲ್ಲರೂ ಏಕೆ ಕೇಳುತ್ತಿದ್ದಾರೆ? ನಿಮಗೆ ಗೊತ್ತಿದೆ ನನಗೆ ಈಗ ಕೇವಲ 25 ವರ್ಷ ವಯಸ್ಸು ಎಂದು. ಮದುವೆಯಾಗಲು ಇದು ತೀರಾ ಕಡಿಮೆ ವಯಸ್ಸು ಎಂದು ನನಗೆ ಅನಿಸುತ್ತದೆ” ಎಂದು ಹೇಳಿದ್ದಾರೆ.
ರಣಬೀರ್ ಹಾಗೂ ಆಲಿಯಾ ಎರಡು ವರ್ಷಗಳಿಂದ ಡೇಟಿಂಗ್‌ನಲ್ಲಿ ಇದ್ದಾರೆ. ಈ ಜೋಡಿ ಆಯನ್ ಮುಖರ್ಜಿರ ’ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದೆ.