ವೈರಲ್ ಆಗಿರುವ ‘ವೇರ್ ವಿ ಅಬೌಟ್ ಟು ಈಟ್ ಅಟ್’ ಮತ್ತು ‘ಯು ಗಾಟ್ ಚೀಸ್’ ಮೆಮೆಯ ಸೃಷ್ಟಿಕರ್ತ 6 ವರ್ಷದ ಆಂಟ್ವೈನ್ ಫೌಲರ್ ಇನ್ನಿಲ್ಲ.
ಅವರ ತಾಯಿ ನಿರ್ವಹಿಸುತ್ತಿರುವ ಫೌಲರ್ ಅವರ Instagram ಖಾತೆಯು ದುರದೃಷ್ಟಕರ ಸುದ್ದಿಯನ್ನು ನೀಡಿದೆ. ಫೌಲರ್ ‘ಆಟೋ ಇಮ್ಯೂನ್ ಎಂಟರೋಪತಿ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಇದು ಆಹಾರದಿಂದ ಪೌಷ್ಟಿಕಾಂಶವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ತಡೆಯುತ್ತದೆ. ಆದಾಗ್ಯೂ, ಆತನ ಸಾವಿಗೆ ಇದೇ ರೋಗ ಕಾರಣವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಅವರ ತಾಯಿ ಸ್ಥಾಪಿಸಿದ GoFundMe ಪೇಜ್ ಪ್ರಕಾರ, ಫೌಲರ್ ಸಾಮಾನ್ಯ ಮಕ್ಕಳಂತೆ ಹಾಲು ಸೇವಿಸಲು ಮತ್ತು ಘನ ಆಹಾರವನ್ನು ತಿನ್ನಲು ಸಾಧ್ಯವಾಗಲಿಲ್ಲ. ಸರಿಸುಮಾರು 25 ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲಾಗಿತ್ತು. ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸುದ್ದಿಯನ್ನು ಹಂಚಿಕೊಂಡ ಆತನ ತಾಯಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅದರಲ್ಲಿ ತಮ್ಮ ನೋವು ಹೇಳಿಕೊಂಡು ಯಾಕೆ ದೇವರೇ?! ಪೋಸ್ಟ್ ಮಾಡಿದ್ದಾರೆ. ನನ್ನ ಹೃದಯ ಹೊರಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
6 ಲಕ್ಷಕ್ಕೂ ಹೆಚ್ಚು ಜನರು ಅನುಸರಿಸುತ್ತಿರುವ ಪೇಜ್ ನಲ್ಲಿ ಫೌಲರ್‌ನ ಪ್ರಗತಿಯನ್ನು ಆಕೆಯ ತಾಯಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು.
ಮೂರು ವಾರಗಳ ಹಿಂದೆ ಹಂಚಿಕೊಳ್ಳಲಾಗಿದ್ದ ಪೋಸ್ಟ್ ನಲ್ಲಿ, ಫೌಲರ್ ಐಸಿಯು ಹಾಸಿಗೆಯ ಮೇಲೆ ಮಲಗಿರುವುದು ಕಂಡುಬರುತ್ತದೆ, ಆತನ ಸುತ್ತಲೂ ವೈದ್ಯಕೀಯ ಉಪಕರಣಗಳ ಸಂಗ್ರಹವೇ ಇದೆ. ಆದರೂ, ಇಂತಹ ಪರಿಸ್ಥಿತಿಯಲ್ಲಿಯೂ ಫೌಲರ್ ಕ್ಯಾಮೆರಾಗೆ ಸ್ಮೈಲ್‌ನೊಂದಿಗೆ ಪೋಸ್ ನೀಡುತ್ತಿದ್ದಾನೆ, ಉಕ್ಕಿನ ಹೃದಯ ಪ್ರದರ್ಶಿಸುತ್ತಾನೆ.
ಫೌಲರ್ ನ ತಾಯಿ ತನ್ನ ಮಗನನ್ನು ಕಳೆದುಕೊಂಡ ನಂತರ ತನಗಿರುವ ಅಪಾರ ದುಃಖವನ್ನು ಹಂಚಿಕೊಳ್ಳಲು ತನ್ನ ವೈಯಕ್ತಿಕ ಖಾತೆ ಬಳಸಿದ್ದಾರೆ. ಅವರು ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ. ನೀವು ಮುಂದುವರಿಯಲು ಸಾಧ್ಯವಿಲ್ಲ ಎಂದಾದರೂ ನಿರ್ಜೀವವಾಗಿರುತ್ತೆ ಎಂದು ಭಾವಿಸಿದ್ದೀರಾ? ನಾನು ಇನ್ನು ಮುಂದೆ ಇಲ್ಲಿರಲು ಬಯಸುವುದಿಲ್ಲ. ಈ ನೋವು ಅಸಹನೀಯವಾಗಿದೆ. ಅದು ನನ್ನ ಮಗು! ಓ ದೇವರೇ? ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಇಂಟರ್ನೆಟ್‌ನಾದ್ಯಂತ ಜನರು ತಮ್ಮ ಸಂತಾಪ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಫೌಲರ್ ವಿಶ್ರಾಂತಿ ಪಡೆಯಲಿ ಎಂದು ಹಾರೈಸಿದ್ದಾರೆ. ಅಂತೆಯೇ, ಅಂತಹ ಕಷ್ಟದ ಸಮಯವನ್ನು ಎದುರಿಸಲು ಫೌಲರ್ ಅವರ ತಾಯಿಗೆ ಎಲ್ಲಾ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.