ತಿರುವನಂತಪುರಂ: ವುಮೆನ್ ಹ್ಯಾವ್ ಲೆಗ್(ಮಹಿಳೆಯರಿಗೆ ಕಾಲಿದೆ) ಎಂಬ ಪದ ಈಗ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಬಿಕಿನಿ ತೊಟ್ಟು ನಿಂತ ಯುವತಿಯೊಬ್ಬಳ ಬೆಂಬಲಕ್ಕೆ ನಿಂತು ಸಾಕಷ್ಟು ಮಹಿಳೆಯರು ಈ ಅಭಿಯಾನ ಆರಂಭಿಸಿದ್ದಾರೆ.
ಮಲೆಯಾಳಿ ನಟಿ ಅನ್ಸ್ ಸ್ವರಾ ರಾಜನ್ ಶಾರ್ಟ್ಸ್ ಹಾಕಿದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದರು. ಅದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಪೂರ್ತಿ ಬಟ್ಟೆ ತೆಗೆದುಬಿಡು ಎಂದೆಲ್ಲ ಅಸಹ್ಯವಾಗಿ ಕಮೆಂಟ್ ಮಾಡಿದ್ದರು.
ಆದರೆ, ಅದಕ್ಕೆ ಹೆದರದ ಅನ್ಸ್ ರಾಜನ್, ಬಿಕಿನಿ ಹಾಕಿದ ಇನ್ನೊಂದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಹ್ಯಾಷ್ ಟ್ಯಾಗ್ ನೊಂದಿಗೆ “ವುಮೆನ್ ಹ್ಯಾವ್ ಲೆಗ್ಸ್” ಎಂದು ಬರೆದಿದ್ದಾರೆ.
ಹಲವು ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತಿದ್ದು, ವುಮೆನ್ ಹ್ಯಾವ್ ಲೆಗ್ಸ್ ಎಂಬ ವಾಕ್ಯವನ್ನು ಸಾಕಷ್ಟು ಫೇಮಸ್ ಮಾಡಿದ್ದಾರೆ. ಇಡೀ ದೇಶದಲ್ಲೇ ಈ ವಾಕ್ಯ ಟ್ರೆಂಡ್ ಆಗುತ್ತಿದೆ.
https://www.instagram.com/p/CFJb8cGAOQS/?utm_source=ig_embed
https://www.instagram.com/p/CFJB4wUjySi/?utm_source=ig_embed
https://www.instagram.com/p/CFKQWlSp9pI/?utm_source=ig_embed
https://www.instagram.com/p/CFLu1ytpThZ/?utm_source=ig_embed