
ಹೆಸರಿನಲ್ಲೇನಿದೆ…? ಒಂದು ವೇಳೆ ನೀವು ಖ್ಯಾತ ವ್ಯಕ್ತಿತ್ವದವರಾಗಿದ್ದರೆ, ನಿಮ್ಮ ಹೆಸರಿನ ವಿಚಾರದಲ್ಲಿ ನೀವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆದರೆ ನೀವು ಹಾಗೂ ನಿಮ್ಮದೇ ಹೆಸರಿನ ಇನ್ನಷ್ಟು ಮಂದಿ ಫೇಮಸ್ ಆಗಿದ್ದರೆ ಏನಾಗುತ್ತದೆ…?
ಕಾಂಗ್ರೆಸ್‌ಮ ಹಿರಿಯ ನಾಯಕ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿರ ಚಿತ್ರಗಳನ್ನು ಶೇರ್ ಮಾಡಿಕೊಂಡು, “ಪ್ರಜಾಪ್ರಭುತ್ವದ ಭವಿಷ್ಯದ ದೊರೆ” ಎಂದು ಬರೆದಿದ್ದಾರೆ. ಈ ಟ್ವೀಟ್‌ಗೆ ಕಾಂಗ್ರೆಸ್ ಬೆಂಬಲಿಗರು ಹಾಗೂ ವಿರೋಧಿಗಳಿಂದ ಪರ-ವಿರೋಧದ ಸಾಕಷ್ಟು ಪ್ರತಿಕ್ರಿಯೆಗಳು ಸಿಕ್ಕಿವೆ.
ಇಂಥ ಒಂದು ಟ್ವೀಟ್ ಮಾಡಿದ ನೆಟ್ಟಿಗರೊಬ್ಬರಿಗೆ ಸಲ್ಮಾನ್ ಖುರ್ಷಿದ್ ಹಾಗೂ ಖ್ಯಾತ ಬರಹಗಾರ ಸಲ್ಮಾನ್ ರಶ್ದಿ ಹೆಸರುಗಳ ನಡುವೆ ಗೊಂದಲ ಹುಟ್ಟಿಕೊಂಡು, ರಶ್ದಿ ಹೆಸರನ್ನು ಟ್ಯಾಗ್ ಮಾಡಿದ್ದಾರೆ. “ಸಲ್ಮಾನ್ ರಶ್ದಿಯಂಥ ಚಮಚಾನಿಂದ ಮಾತ್ರವೇ ಪ್ರಜಾಪ್ರಭುತ್ವದ ಉಲ್ಲೇಖದ ಸಂದರ್ಭದಲ್ಲಿ ’ದೊರೆ’ ಎಂಬ ಶಬ್ದ ಬರುತ್ತದೆ” ಎಂದು ಆ ನೆಟ್ಟಿಗ ಖುರ್ಷಿದ್‌ರನ್ನು ಟೀಕಿಸುವ ಭರದಲ್ಲಿ ಸಲ್ಮಾನ್ ರಶ್ದಿ ಹೆಸರನ್ನು ಟ್ಯಾಗ್ ಮಾಡಿದ್ದಾರೆ.
ಜೂನ್ 7 ರವರೆಗೆ ಕಠಿಣ ಲಾಕ್ ಡೌನ್, ಪೊಲೀಸರಿಗೆ ಫುಲ್ ಪವರ್ -ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಸೂಚನೆ
ಈ ಟ್ವೀಟ್‌ಗೆ ಖುದ್ದು ಪ್ರತಿಕ್ರಿಯಿಸಿದ ರಶ್ದಿ, “ನೀವು ತಪ್ಪಾದ ಸಲ್ಮಾನ್‌ಗೆ ಟ್ವೀಟ್ ಮಾಡಿದ್ದೀರಿ. ನಾನು ಸಲ್ಮಾನ್ ಖಾನ್” ಎಂದು ತಮ್ಮದೇ ಟಿಪಿಕಲ್ ಶೈಲಿಯಲ್ಲಿ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.ಈ ನಗೆಪಾಟಲಿನ ಸಂವಹನವು ಟ್ವಿಟರ್‌ನಲ್ಲಿ ವೈರಲ್ ಆಗಿ ನೆಟ್ಟಿಗರು ಬಲೇ ಮಜಾ ತೆಗೆದುಕೊಳ್ಳುತ್ತಿದ್ದಾರೆ.