
ಈ ಕ್ರಿಕೆಟಿಗರು, ಸಿನೆಮಾ ಮಂದಿಯ ಜೀವನದಲ್ಲಿ ನಡೆಯುವ ಒಂದೊಂದು ಸಣ್ಣ-ಪುಟ್ಟ ಘಟನೆಗಳೆಲ್ಲಾ ದೇಶದ ಪ್ರಗತಿಯ ದಿಕ್ಕನ್ನೇ ಬದಲಿಸುವ ಸುದ್ದಿ ಎಂಬಂತೆ ವರದಿ ಮಾಡುವವರಿಗೂ, ಅದನ್ನು ನೋಡುವವರಿಗೂ ಎಂದೂ ಕೊರತೆ ಇಲ್ಲ ನೋಡಿ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸೆಲೆಬ್ರಿಟಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು ಜನವರಿಯಲ್ಲಿ ಅವರಿಗೆ ಡೆಲಿವರಿ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಅನುಷ್ಕಾ, ಜನವರಿಯಲ್ಲಿ ತಮ್ಮ ಮಗುವಿನ ಹೆರಿಗೆಯಾದ ಕೂಡಲೇ ಶೂಟಿಂಗ್ ಕೆಲಸದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
“ಸೆಟ್‌ನಲ್ಲಿ ಇರುವುದು ಬಹಳ ಖುಷಿ ಕೊಡುತ್ತದೆ. ನನ್ನ ಇಡೀ ಟೀಂ ಜೊತೆಗೆ ಶೂಟಿಂಗ್‌ನಲ್ಲಿ ಮಗ್ನಳಾಗಿ ಇರಬಹುದಾಗಿದೆ. ನನಗೆ ಶೂಟಿಂಗ್‌ಗೆ ಮರಳಬೇಕೆಂಬ ಆಸೆಯಿತ್ತು. ಈ ವರ್ಷ ಇಂಡಸ್ಟ್ರಿಗೆ ಬಹಳ ಕಷ್ಟವಾಗಿದೆ ಆದರೂ ಸಹ ನಾನು ಮತ್ತೆ ನನ್ನ ವೃತ್ತಿಯನ್ನು ಹೊಸ ಹುಮ್ಮಸ್ಸಿನೊಂದಿಗೆ ಪುನಾರಂಭ ಮಾಡಲು ಉತ್ಸುಕಳಿದ್ದೇನೆ” ಎಂದು ಅನುಷ್ಕಾ ತಿಳಿಸಿದ್ದಾರೆ.