
ತಮ್ಮನ್ನು ಮನೆಯಲ್ಲಿ ಕಾಣಲು 900 ಕಿಮೀ ಪ್ರಯಾಣಿಸಿ ಕೊಡಗಿಗೆ ಬಂದಿದ್ದ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ ಹುಚ್ಚಾಟಕ್ಕೆ ಮುಂದಾಗಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
“ಸ್ನೇಹಿತರೇ ನಿಮ್ಮಲ್ಲೊಬ್ಬರು ನನ್ನನ್ನು ನೋಡಲು ಬಹಳ ದೂರದಿಂದ ನಮ್ಮ ಮನೆಗೆ ಹೋಗಿದ್ದಿರಿ ಎಂದು ತಿಳಿದುಬಂತು. ದಯವಿಟ್ಟು ಹಾಗೆಲ್ಲಾ ಮಾಡಬೇಡಿ. ನಿಮ್ಮನ್ನು ಭೇಟಿಯಾಗಲು ಆಗಲಿಲ್ಲ ಎಂದು ನನಗೂ ಬೇಸರವಾಗಿದೆ. ಒಂದು ದಿನ ನಿಮ್ಮನ್ನು ಭೇಟಿ ಮಾಡಬೇಕೆಂದು ನನಗೂ ಅನಿಸುತ್ತದೆ. ಆದರೆ ಸದ್ಯಕ್ಕೆ ನನಗೆ ಅಲ್ಲಿಂದಲೇ ಪ್ರೀತಿ ತೋರಿ. ನನಗೆ ಅಷ್ಟೇ ಸಂತೋಷ!” ಎಂದು ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸೀರೆಯಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ
ತೆಲಂಗಾಣದ ಈ ಅಭಿಮಾನಿ ಗೂಗಲ್ ಸಹಾಯದಿಂದ ರಶ್ಮಿಕಾ ಮನೆಯನ್ನು ಹುಡುಕಿಕೊಂಡು ಬಂದಿದ್ದಾನೆ. ಅಪರಿಚಿತ ವ್ಯಕ್ತಿಯೊಬ್ಬ ಹೀಗೆ ಬಂದು ರಶ್ಮಿಕಾ ಮನೆಯ ವಿಳಾಸ ಕೇಳುತ್ತಿದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರು ಆತನನ್ನು ಮನೆಗೆ ಕಳುಹಿಸಿದ್ದಾರೆ. ಶೂಟಿಂಗ್ ಕೆಲಸದ ಮೇಲೆ ಮುಂಬೈಯಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಆ ವೇಳೆ ತಮ್ಮ ಕೊಡಗಿನ ಮನೆಯಲ್ಲಿ ಇರಲಿಲ್ಲ.
ಹಾಟ್ ಫೋಟೋ ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ
ಕನ್ನಡದಲ್ಲಿ ಪಾದಾರ್ಪಣೆ ಮಾಡಿ ಈಗ ತಮಿಳು ಹಾಗೂ ತೆಲುಗಿನಲ್ಲಿ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡಿರುವ ರಶ್ಮಿಕಾ, ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದು, ಅಮಿತಾಭ್ ಬಚ್ಚನ್ ಜೊತೆಗೆ ’ಗುಡ್‌ಬೈ’ ಚಿತ್ರದಲ್ಲಿ ನಟಿಸಲಿದ್ದಾರೆ.