ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣ ಸಾರ್ವಜನಿಕರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಲವು ಪ್ರಯತ್ನ ಮಾಡುತ್ತಿದ್ದು, ಇದೀಗ ಪಾತಾಳಲೋಕ್‌ನ ಫೋಟೋವನ್ನು ಬಳಸಿಕೊಂಡಿದ್ದಾರೆ.
ಹೌದು, ಅಮೆಜಾನ್ ಪ್ರೈಮ್‌ನಲ್ಲಿ ಭಾರಿ ಖ್ಯಾತಿ ಪಡೆದಿದ್ದ ಪಾತಾಳ್ ಲೋಕ್ ವೆಬ್ ಸೀರಿಸ್‌ನ ಪ್ರಮುಖ ಪಾತ್ರಧಾರಿ ಹಾಥಿರಾಮ್ ಅವರ ಫೋಟೋ ಬಳಸಿಕೊಂಡು, ವಾಟ್ಸಾಪ್ ನಲ್ಲಿ ಬರುವ ಸುಳ್ಳು ಸುದ್ದಿಗಳು, ವೈರಸ್‌ಗಿಂತ ಅಪಾಯಕಾರಿ ಎಂದು ಜಾಗೃತಿ ಮೂಡಿಸಿದ್ದಾರೆ.
ಹೈದರಾಬಾದ್ ಪೊಲೀಸರು ಈ ರೀತಿ ಟ್ವೀಟರ್‌ನಲ್ಲಿ ಹಾಕಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ. ಹೈದರಾಬಾದ್ ಪೊಲೀಸರ ಮೊದಲು ಮುಂಬೈ ಪೊಲೀಸರು ಇದೇ ಪಾತ್ರವನ್ನಿಟ್ಟುಕೊಂಡು ಜಾಗೃತಿ ಮೂಡಿಸಿದ್ದರು.
https://twitter.com/MumbaiPolice/status/1261878887643934720?ref_src=twsrc%5Etfw%7Ctwcamp%5Etweetembed%7Ctwterm%5E1261878887643934720%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fhyderabad-police-takes-help-of-paatal-loks-haathi-ram-to-spread-awareness-against-fake-news-2871691.html