alex Certify 2020 ಹೇಗೆ ನಡೆಯುತ್ತಿದೆ ಎನ್ನುವವರಿಗೆ ಯೂಟ್ಯೂಬ್​ ನಲ್ಲಿ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ಹೇಗೆ ನಡೆಯುತ್ತಿದೆ ಎನ್ನುವವರಿಗೆ ಯೂಟ್ಯೂಬ್​ ನಲ್ಲಿ ಉತ್ತರ

ಕೊರೊನಾ ವೈರಸ್​ನಿಂದಾಗಿ ಹೆಚ್ಚಿನ ಜನತೆ ಮಾರ್ಚ್​ನಿಂದ ಮನೆಯಲ್ಲೇ ಇದ್ದಾರೆ. ಮಾರ್ಚ್​ನಿಂದ ಶುರುವಾದ ವರ್ಕ್ ಫ್ರಮ್​ ಹೋಂಗಳು ಅನೇಕ ಕಂಪನಿಗಳಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಹೀಗಾಗಿ ಯಾರಾದರೂ 2020 ಹೇಗೆ ನಡೆಯುತ್ತಿದೆ ಅಂತಾ ಕೇಳಿದ್ರೆ ಏನು ಉತ್ತರ ಕೊಡೋದು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ಆದರೆ ನೀವಿನ್ನು ಈ ಪ್ರಶ್ನೆಗೆ ಉತ್ತರ ನೀಡಲು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಯೂ ಟ್ಯೂಬ್​ ಇಂಡಿಯಾ ಈ ಪ್ರಶ್ನೆಗೆ ಉತ್ತರ ನೀಡಿದೆ. ನಿಮ್ಮ ಬಳಿ ಯಾರಾದರೂ 2020 ಹೇಗೆ ನಡೆಯುತ್ತಿದೆ ಅಂತಾ ಕೇಳಿದರೆ ಈ ಹಾಡಿನ ಲಿಂಕ್​ ಕಳಿಸಿ ಎಂದು ಕ್ಯಾಪ್ಶನ್​ ಬರೆಯುವ ಮೂಲಕ ತನ್ನ ಇನ್​ಸ್ಟಾ್ಗ್ರಾಂ ಖಾತೆಯಲ್ಲಿ ಹಾಡೊಂದನ್ನ ಶೇರ್​ ಮಾಡಿದೆ.

ತಿಂದುಂಡು ಮಲಗಿ ಅನ್ನೋದೇ 2020ರಲ್ಲಿಮಾಡಿದ ಕೆಲಸವಾಗಿದೆ ಎಂಬರ್ಥದಲ್ಲಿ ಈ ಹಾಡನ್ನ ರಚಿಸಲಾಗಿದೆ. ಈ ಹಾಡಿನಲ್ಲಿರುವ ಪುರುಷರು ಶಾರ್ಟ್ಸ್​ ಮೇಲೆ ಬ್ಲೇಜರ್​ ಹಾಕುವ ಮೂಲಕ ವರ್ಕ್ ಫ್ರಾಮ್​ ಹೋಂ ಕಷ್ಟವನ್ನ ಹೇಳಿಕೊಳ್ತಾರೆ . ಚಿಪ್ಸ್ ತಿನ್ನುತ್ತಾ ಹಾಸಿಗೆ ಮೇಲೆ ಕೂತು ಕೆಲಸ ಮಾಡುವ ಮೂಲಕ 2020ರನ್ನ ಬಣ್ಣಿಸಲಾಗಿದೆ. ಇನ್ಸ್​ಟಾಗ್ರಾಂನಲ್ಲಿ ಈ ವಿಡಿಯೋ 16 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...