alex Certify ಕೊನೆ ಕ್ಷಣದವರೆಗೂ ಹೋರಾಟ, ವಿಧಿಯಾಟದ ಮುಂದೆ ಕೈಗೂಡದ ವೈದ್ಯರ ಪ್ರಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆ ಕ್ಷಣದವರೆಗೂ ಹೋರಾಟ, ವಿಧಿಯಾಟದ ಮುಂದೆ ಕೈಗೂಡದ ವೈದ್ಯರ ಪ್ರಯತ್ನ

ಬೆಂಗಳೂರು: ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಮಧ್ಯಾಹ್ನ 3.48 ಕ್ಕೆ ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ 2.20 ರ ಸುಮಾರಿಗೆ ಚಿರಂಜೀವಿ ಸರ್ಜಾ ಅವರನ್ನು ಅಪೋಲೊ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಅವರಿಗೆ ತುರ್ತುಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ವೈದ್ಯರ ತಂಡ ಕೂಡಲೇ ಕಾರ್ಯೋನ್ಮುಖರಾಗಿ ಚಿರಂಜೀವಿ ಸರ್ಜಾ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡಿದ್ದು ಈ ವೇಳೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

ವೈದ್ಯರ ತಂಡ ಕೊನೆ ಕ್ಷಣದವರೆಗೂ ಚಿರಂಜೀವಿ ಸರ್ಜಾ ಅವರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನಗಳನ್ನು ನಡೆಸಿದ್ದು, ಆದರೆ ವಿಧಿಯಾಟದ ಎದುರು ವೈದ್ಯರ ಪ್ರಯತ್ನ ಕೈಗೂಡಿಲ್ಲ. 3.48 ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆಯಿಂದ ಪ್ರಕಟಣೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...