ಕಿರುತೆರೆ ನಟಿ ಹೀನಾ ಖಾನ್ ತಮ್ಮ ಮಾಲ್ಡೀವ್ಸ್ ಟೂರ್ನ ಫೋಟೋಗಳಿಂದಲೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿ ಇದ್ದಾರೆ.
ಹೀನಾ ಮಾಲ್ಡೀವ್ ರೋಮ್ಯಾಂಟಿಕ್ ಗೇಟ್ವೇನಲ್ಲಿ ತನ್ನ ಪೋಷಕರು ಹಾಗೂ ಬಾಯ್ಫ್ರೆಂಡ್ ರಾಕಿ ಜೈಸ್ವಾಲ್ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ತೆಗೆದ ಕೆಲ ಫೋಟೋಗಳನ್ನ ನಟಿ ಶೇರ್ ಮಾಡಿದ್ದು ಈ ಎಲ್ಲಾ ಫೋಟೋಗಳಲ್ಲಿ ಸಖತ್ ಹಾಟ್ ಆಗಿ ಕಾಣ್ತಿದ್ದಾರೆ. ಇನ್ನು ಹೀನಾ ಖಾನ್ರ ಫೋಟೋ ನೋಡಿದ ಪಡ್ಡೆ ಹುಡುಗರು ಲೈಕ್ಸ್ ಹಾಗೂ ಕಮೆಂಟ್ಸ್ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ನಟಿ ಹೀನಾ ಖಾನ್ ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಕಸೌತಿ ಝಿಂದಗಿ ಕಿ ಧಾರವಾಹಿ ಮೂಲಕ ಜನರ ಮನಸ್ಸನ್ನ ಗೆದ್ದಿದ್ದರು. ಹೆಸರಾಂತ ಶೋಗಳಾದ ಖತರೋ ಕಿ ಕಿಲಾಡಿ – 8 ಹಾಗೂ ಬಿಗ್ ಬಾಸ್ 11ನಲ್ಲೂ ಹೀನಾ ಖಾನ್ ಅದ್ಭುತ ಪ್ರದರ್ಶನ ನೀಡಿದ್ದರು.