alex Certify ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ವರದಿಯ ಪ್ರಕಾರ, ಆರಂಭದಲ್ಲಿ ಸಂಜಯ್ ಉಸಿರಾಡಲು ತೊಂದರೆ ಅನುಭವಿಸುತ್ತಿದ್ದರು. ಸಂಜಯ್ ಮನೆಯ ಆಕ್ಸಿಮೀಟರ್‌ನಲ್ಲಿ ತಮ್ಮ ಆಮ್ಲಜನಕವನ್ನು ಪರಿಶೀಲಿಸಿದಾಗ ಆಮ್ಲಜನಕದ ಮಟ್ಟ ಕುಸಿಯುತ್ತಿರುವುದನ್ನು ನೋಡಿದ್ದಾರೆ.  ಇದರ ನಂತರ ಅವರು ಲೀಲಾವತಿ ಆಸ್ಪತ್ರೆಗೆ ಹೋಗಿದ್ದಾರೆ.

ಅಲ್ಲಿ ಅವರಿಗೆ ಕೋವಿಡ್ 19 ಪರೀಕ್ಷೆ ಮಾಡಲಾಗಿದೆ. ಆದ್ರೆ ವರದಿ ನೆಗೆಟಿವ್ ಬಂದಿದೆ. ಆದ್ರೆ ಸಂಜಯ್  ಸಮಸ್ಯೆ ಕಡಿಮೆಯಾಗಿರಲಿಲ್ಲ. ಸಂಜಯ್ ಬಲ ಶ್ವಾಸಕೋಶದ ಮೂಲಕ ಗಾಳಿ ಹೋಗುತ್ತಿಲ್ಲ ಎಂಬುದು ತಿಳಿದಿದೆ. ಸಿಟಿ ಸ್ಕ್ಯಾನ್  ಮಾಡಿದಾಗ ಬಲ ಶ್ವಾಸಕೋಶದಲ್ಲಿ ಕೆಲವು ದ್ರವ ಮತ್ತು ಎರಡೂ ಲಂಗ್‌ಗಳಲ್ಲಿ ಕೆಲವು ಗಾಯ ಕಂಡಿದೆ. ಇದು ಬ್ಯಾಕ್ಟೀರಿಯಾ, ಟಿಬಿ ಅಥವಾ ಕ್ಯಾನ್ಸರ್ ಸೋಂಕು ಇರಬಹುದೆಂದು ಆಸ್ಪತ್ರೆಯವರು ತಿಳಿಸಿದ್ದಾರೆ. ದ್ರವ ಹೊರ ತೆಗೆದು ಪರೀಕ್ಷಿಸಿದಾಗ ಕ್ಯಾನ್ಸರ್ ಎಂಬುದು ಗೊತ್ತಾಗಿದೆ. ನಂತ್ರ ಪಿಇಟಿ ಸ್ಕ್ಯಾನ್ ಮಾಡಲಾಗಿದೆ. ಕ್ಯಾನ್ಸರ್ ಇರುವುದು ಗೊತ್ತಾಗ್ತಿದ್ದಂತೆ ಸಂಜಯ್ ಕೌನ್ಸಲಿಂಗ್ ಸೆಷನ್ ತೆಗೆದುಕೊಂಡ್ರು. ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವೆಂಬ ಕಾರಣಕ್ಕೆ ಕೀಮೋಥೆರಫಿ ಮಾಡಬೇಕಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...