
ಮದುವೆಯಾದ ಮೇಲೆ ಹಿಂದೂ ಮಹಿಳೆಯರು ಹಣೆಗೆ ಸಿಂಧೂರು ಹಚ್ಚಿಕೊಳ್ಳೋದು ಮಾಮೂಲಿ. ಆದರೆ ಅನುಷ್ಕಾ ಶರ್ಮಾರ ದೀಪಾವಳಿ ಸ್ಪೆಶಲ್ ಫೋಟೋದಲ್ಲಿ ಹಣೆಯ ಮೇಲೆ ಸಿಂಧೂರ ಕಾಣಿಸುತ್ತಿರಲಿಲ್ಲ.
ಹೀಗಾಗಿ ಯುನಿವರ್ಸಲ್ ಇನ್ ಸೈಟ್ಸ್ ಎಂಬ ಯು ಟ್ಯೂಬ್ ಚಾನೆಲ್ ಅನುಷ್ಕಾ ಶರ್ಮಾರ ಹಣೆಯಲ್ಲಿ ಸಿಂಧೂರ ಇದ್ದಂತೆ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದೆ. ಆದರೆ ನೆಟ್ಟಿಗರು ಇದನ್ನ ಇಷ್ಟಪಟ್ಟಿಲ್ಲ. ಬದಲಾಗಿ ಅವೆಲ್ಲ ಮಹಿಳೆಯರ ಇಚ್ಚೆಯಾಗಿರಬೇಕೆ ಹೊರತು ಬಲವಂತದ ಕೆಲಸವಾಗಬಾರದು ಅಂತಾ ಹೇಳಿದ್ದಾರೆ.