![He Was a Tree': Rajshri Despande Pays Tribute to Irrfan Khan ...](https://images.news18.com/ibnlive/uploads/2020/07/1596097445_tree.jpg?impolicy=website&width=536&height=356)
ಬಾಲಿವುಡ್ ಇಂಡಸ್ಟ್ರಿಗೆ 2020 ದುರಂತದ ವರ್ಷ. ಇಂಡಸ್ಟ್ರಿ ಈ ವೇಳೆ ಘಟಾನುಘಟಿ ಕಲಾವಿದರನ್ನು ಕಳೆದುಕೊಂಡು ಬಡವಾಗಿದೆ.
ಇರ್ಫಾನ್ ಖಾನ್, ಸುಶಾಂತ ಸಿಂಗ್ ರಜಪೂತ್, ರಿಶಿ ಕಪೂರ್, ಕೋರಿಯೋಗ್ರಾಫರ್ ಸರೋಜ್ ಖಾನ್ ಲೋಕ ತ್ಯಜಿಸಿದ್ದಾರೆ. ನಟಿ ಹಾಗೂ ಹೋರಾಟಗಾರ್ತಿ ರಾಜಶ್ರೀ ದೇಶಪಾಂಡೆ ಈ ಪ್ರತಿಭಾವಂತರನ್ನು ನೆನೆಸಿಕೊಳ್ಳಲು ವಿಶಿಷ್ಟ ವಿಧಾನ ಕಂಡುಕೊಂಡಿದ್ದಾರೆ. ಇರ್ಫಾನ್ ಖಾನ್ ಹಾಗೂ ಸುಶಾಂತ ಸಿಂಗ್ ರಜಪೂತ್ ಹೆಸರಿನಲ್ಲಿ ಗಿಡ ನೆಟ್ಟಿದ್ದಾರೆ.
ಇರ್ಫಾನ್ ಖಾನ್ ಅವರು ನ್ಯೂರೋಎಂಡೊಕ್ರೈನ್ ಟ್ಯೂಮರ್ ವಿರುದ್ಧ ಹೋರಾಟ ನಡೆಸಿ ಕೊನೆಯುಸಿರೆಳೆದರು. ಆದರೆ, ಅವರು ಭಾರತೀಯ ಸಿನಿಮಾ ಲೋಕಕ್ಕೆ ಸಾಟಿಯಿಲ್ಲದ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಅವರು ಹಲವು ನಟರಿಗೆ ದಾರಿದೀಪ ಎಂದು ರಾಜಶ್ರೀ ದೇಶಪಾಂಡೆ ಹೇಳಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ನೆಟ್ಟ ಗಿಡದ ಫೋಟೋ ಹಂಚಿಕೊಂಡಿರುವ ರಾಜಶ್ರೀ “ಅವರು ಒಂದು ಮರವಾಗಿದ್ದರು. ನನ್ನಂಥ ಸಾವಿರಾರು ಸಿನಿಮಾ ಪ್ರಯಾಣಿಕರಿಗೆ ಆ ಮರ ನೆರಳಾಗಿದೆ. ಅವರು ನಮಗೆ ಕಲಿಸಿದರು. ಅವರು ದಾರಿ ತೋರಿಸಿದರು. ನನ್ನಂಥ ಕಲಾವಿದರಿಗೆ ಸಿನಿಮಾದ ಬಾಗಿಲು ತೆರೆದುಕೊಟ್ಟರು. ಇದು ನಿಮಗಾಗಿ ಸರ್” ಎಂದು ಬರೆದಿದ್ದಾರೆ.