ಚೆನ್ನೈ: ಆನ್ಲೈನ್ ಜೂಜಿಗೆ ಅನುಕೂಲವಾಗುವಂತೆ ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಖ್ಯಾತ ನಟರಾದ ಸುದೀಪ್, ಪ್ರಕಾಶ್ ರೈ, ರಾಣಾ, ನಟಿ ತಮನ್ನಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಆನ್ಲೈನ್ ಗ್ಯಾಂಬ್ಲಿಂಗ್ ಕಾರಣವಾಗುತ್ತಿದೆ. ಗ್ಯಾಂಬ್ಲಿಂಗ್ ಗೆ ಸಮಾಜದ ಪ್ರಮುಖರ ಪ್ರಚಾರ ಸರಿಯಲ್ಲ ಎಂದು ಪಿಟಿಷನ್ ಆಧಾರದಲ್ಲಿ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಆನ್‌ಲೈನ್ ಜೂಜಾಟಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ವಿರಾಟ್ ಕೊಹ್ಲಿ, ಸುದೀಪ್, ತಮನ್ನಾ ಭಾಟಿಯಾ ಮೊದಲಾದವರನ್ನು ಬಂಧಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆನ್‌ಲೈನ್ ಜೂಜಾಟವನ್ನು ನಿಷೇಧಿಸುವಂತೆ ಕೋರಿ ವಕೀಲರೊಬ್ಬರು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಅನುಸರಿಸಿ, ಹೈಕೋರ್ಟ್‌ನ ಮಧುರೈ ಪೀಠ ನೋಟಿಸ್ ಕಳುಹಿಸಿದೆ. ತಮಿಳುನಾಡಿನಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವಂತೆ ಕೋರಿದ ಪ್ರಕರಣದಲ್ಲಿ ನವೆಂಬರ್ 19 ರೊಳಗೆ ಪ್ರತಿಕ್ರಿಯಿಸಲು ಆದೇಶಿಸಲಾಗಿದೆ ಎಂದು ಹೇಳಲಾಗಿದೆ.