![](https://kannadadunia.com/wp-content/uploads/2020/08/edc85f16-2c1a-4174-9a52-cd82560a20b9.jpg)
1990ರ ದಶಕದಲ್ಲಿ ಆಡಿಕೊಂಡು ಬೆಳೆದ ಹುಡುಗರಿಗೆಲ್ಲಾ ಫೇವರಿಟ್ ಆಗಿದ್ದ ’ಹೋಂ ಅಲೋನ್’ ಚಿತ್ರಗಳ ಸರಣಿಯನ್ನು ನಾವೆಲ್ಲಾ ನೋಡೇ ಇದ್ದೇವೆ. ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದ ’ಕೆವಿನ್ ಮ್ಯಾಕ್‌ಅಲೆಸ್ಟರ್’ ಪಾತ್ರಧಾರಿಯಾಗಿ ನಟಿಸಿದ ಮೆಕಾಲೆ ಕಲ್ಕಿನ್ ಬಹಳ ಫೇಮಸ್ ಆಗಿದ್ದ.
ಕೆವಿನ್ ಮ್ಯಾಕ್‌ಅಲೆಸ್ಟರ್ ನಮ್ಮ ನಡುವೆಯೇ ಇರುವ ಹುಡುಗ ಎಂಬ ಮಟ್ಟಿಗೆ ಆತನೊಂದಿಗೆ ಅಟ್ಯಾಚ್ಮೆಂಟ್ ಬೆಳೆಸಿಕೊಂಡುಬಿಟ್ಟಿದ್ದೆವು. ಈಗ ಇದೇ ಕಲ್ಕಿನ್‌ಗೆ 40 ವರ್ಷ ತುಂಬಿದೆ ಎಂದರೆ ನಂಬಲು ಬಹಳ ಕಷ್ಟವಾಗುತ್ತದೆ ಅಲ್ಲವೇ?
ತಮ್ಮ ಹುಟ್ಟುಹಬ್ಬದಂದು ತಮ್ಮ ವಯಸ್ಸೆಷ್ಟು ಎಂದು ಕಲ್ಕಿನ್ ತಿಳಿಸಿದ್ದು ಎಲ್ಲರಿಗೂ ಅಚ್ಚರಿಯ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಕಲ್ಕಿನ್‌ಗೆ ಈಗ 40 ವರ್ಷ ವಯಸ್ಸಾಗಿದೆ!
“Hey guys, wanna feel old? I’m 40. You’re welcome,” ಎಂದು ತಮ್ಮದೇ ಚೀಕೀ ಸ್ಟೈಲ್‌ನಲ್ಲಿ ಕಲ್ಕಿನ್ ಟ್ವೀಟ್ ಮಾಡಿದ್ದಾರೆ.