
93 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದ ದಿನ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
93ರ ವಯಸ್ಸಿನಲ್ಲಿಯೂ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ವೃದ್ಧೆ, ಬಿಳಿ ಸೀರೆಗೆ ಗೋಲ್ಡನ್ ಕಲರ್ ಬಾರ್ಡರ್ ಇದೆ. ಇದರೊಂದಿಗೆ ನೆಕ್ಲೆಸ್ ನ್ನು ಧರಿಸಿದ್ದಾರೆ.
ಸಿಂಬಾ ಚಿತ್ರದ ಆಂಕ್ ಮೇರೆ ಹಾಡನ್ನು ಹಾಕುತ್ತಿದ್ದಂತೆ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಇದನ್ನು ಆಕೆಯ ಮೊಮ್ಮಗ ಗೌರವ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಇಳಿ ವಯಸ್ಸಿನಲ್ಲಿಯೂ ಅಜ್ಜಿಯ ಜೀವನ ಉತ್ಸಾಹ ಹಾಗೂ ಡಾನ್ಸ್ ಮಾಡಲು ಇರುವ ಶಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಈ ವಿಡಿಯೋ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದೆ. ಅಜ್ಜಿಯ ಡಾನ್ಸ್‌ಗೆ ನೆಟ್ಟಿಗರೊಬ್ಬರು, ಈ ಡಾನ್ಸ್ ನೋಡಿದರೆ ಆವರ ವಯಸ್ಸಿಗೂ ಉತ್ಸಾಹಕ್ಕೂ ಸಂಬಂಧವಿಲ್ಲ ಎನಿಸುತ್ತದೆ ಎಂದಿದ್ದಾರೆ.
https://www.facebook.com/gourav.saha.754/videos/10221045055654842/?t=1
https://www.facebook.com/gourav.saha.754/posts/10221044960612466