ಭಾರತೀಯ ಸಂಗೀತ ಸಂಯೋಜಕ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಮತ್ತೆ ಅಂತರರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಅತಿದೊಡ್ಡ ಲಹರಿ ಮ್ಯೂಸಿಕ್ ನಿರ್ಮಾಣದ ಆಲ್ಬಂ ‘ಡಿವೈನ್ ಟೈಡ್ಸ್’ 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದೆ.
2015 ರಲ್ಲಿ ರಿಕಿ ಕೇಜ್ ಗ್ತ್ಯಾಮಿ ಅವಾರ್ಡ್ ಗೆದ್ದಿದ್ದರು. ಅವರಿಗೆ ಇದು ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ. ಅವರು ಈವರೆಗೆ ಗ್ತ್ಯಾಮಿ ಅವಾರ್ಡ್ ಗೆದ್ದ 4ನೇ ಭಾರತೀಯರಾಗಿದ್ದಾರೆ.
ರಿಕಿ ಕೇಜ್ ಅವರ ಹಿಂದಿನ ಗ್ರ್ಯಾಮಿ ಪ್ರಶಸ್ತಿಯು 2015 ರಲ್ಲಿ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿದ ಅವರ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗಾಗಿ ಬಂದಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಕೇವಲ 4 ನೇ ಭಾರತೀಯರಾಗಿದ್ದಾರೆ.
‘ಡಿವೈನ್ ಟೈಡ್ಸ್’ 9 ಹಾಡುಗಳು ಮತ್ತು 8 ಮ್ಯೂಸಿಕ್ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯ, ಸ್ಪೇನ್ ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ.