alex Certify ವಂಚನೆಗೆ ಒಳಗಾಗಿ 16 ಕೋಟಿ ರೂ. ಕಳೆದುಕೊಂಡ ಬಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚನೆಗೆ ಒಳಗಾಗಿ 16 ಕೋಟಿ ರೂ. ಕಳೆದುಕೊಂಡ ಬಾಲಿವುಡ್ ನಟ

ಕಳೆದ 14-15 ವರ್ಷಗಳ ಅವಧಿಯಲ್ಲಿ ಪದೇ ಪದೇ ತಮ್ಮ ಮೇಲೆ ಬೀಸಲಾದ ವಂಚನೆಯ ಬಲೆಯಿಂದಾಗಿ 16 ಕೋಟಿ ರೂ.ಗಳಷ್ಟು ಕಳೆದುಕೊಂಡಿರುವುದಾಗಿ ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

“ಕಳೆದ 14-15 ವರ್ಷಗಳಲ್ಲಿ, ನಾನು ಹೂಡಿಕೆ ಮಾಡಿದ 16 ಕೋಟಿ ರೂಗಳಷ್ಟು ದುಡ್ಡನ್ನು ಕಳೆದುಕೊಂಡಿದ್ದೇನೆ. ಉದ್ಯಮದ ಅನೇಕ ಮಂದಿಯಿಂದ ನಾನು ಕೆಟ್ಟದಾಗಿ ನಡೆಸಿಕೊಳ್ಳಲ್ಪಟ್ಟಿದ್ದೇನೆ. ನನ್ನ ಚಿತ್ರಗಳಿಗೆ ಥಿಯೇಟರ್‌ಗಳು ಸಿಗದೇ ನನ್ನ ವೃತ್ತಿಯನ್ನೇ ಮುಗಿಸಲು ನೋಡಲಾಗಿತ್ತು, ಆದರೆ ಅದು ಆಗಲಿಲ್ಲ. ನಾನು ಈಗ 2021ನ್ನು ದೊಡ್ಡದಾಗಿ ಆರಂಭಿಸಲು ಸಜ್ಜಾಗಿದ್ದೇನೆ,” ಎಂದು ಮಾಧ್ಯಮವೊಂದರೊಂದಿಗೆ ನಡೆದ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

“ಹೊಸದೊಂದು ವದಂತಿ ಸದ್ದು ಮಾಡಲು ಆರಂಭಿಸಿದೆ. ಅವರು ನನಗೆ ಚಿತ್ರಗಳನ್ನು ಆಫರ್‌ ಮಾಡಿ ಅವುಗಳಲ್ಲಿ ಸೆಕ್ಸ್‌ ಹಾಗೂ ಹಿಂಸಾಚಾರವೇ ಇರುತ್ತದೆ. ಬರೀ ಸೆಕ್ಸ್‌ ಇರುವ ಚಿತ್ರವನ್ನೇ ಮಾಡಬೇಕೆಂದು ನಿಮಗೆ ಅನಿಸಿದಲ್ಲಿ ನೀಲಿ ಚಿತ್ರಗಳನ್ನೇ ಮಾಡಬಹುದಲ್ಲ?” ಎಂದು ಹೇಳಿರುವ ಗೋವಿಂದಾ, 2021ರಲ್ಲಿ ತಮ್ಮ ಮುಂದೆ 3-4 ಚಿತ್ರಗಳು ಇವೆ ಎಂದಿದ್ದಾರೆ.

2019ರಲ್ಲಿ ಬಿಡುಗಡೆಯಾದ ಕಾಮಿಡಿ ಚಿತ್ರ ರಂಗೀಲಾ ರಾಜಾದಲ್ಲಿ ಕಡೆಯ ಬಾರಿಗೆ ಗೋವಿಂದಾ ಕಾಣಿಸಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...