ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ, ಜೂ. ಎನ್.ಟಿ.ಆರ್., ರಾಮ್ ಚರಣ್ ಅಭಿನಯದ ‘ಆರ್.ಆರ್.ಆರ್.’ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದೆ.
ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರಶಸ್ತಿಯ ಗರಿ ಸಿಕ್ಕಿದೆ. ಅಮೆರಿಕದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದುಕೊಂಡಿದೆ.
80 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನಲ್ಲಿ ಆಯೋಜಿಸಲಾಗಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿರುವ ಬೆವರ್ಲಿ ಹಿಲ್ಟನ್‌ನಲ್ಲಿ ಸಮಾರಂಭ ನಡೆಯಲಿದೆ.
ಭಾರತೀಯ ಚಲನಚಿತ್ರ ‘RRR’ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಮತ್ತು ‘ನಾಟು ನಾಟು’ ಗಾಗಿ ಅತ್ಯುತ್ತಮ ಮೂಲ ಗೀತೆ ವಿಭಾಗಗಳ ಅಡಿಯಲ್ಲಿ ಎರಡು ನಾಮನಿರ್ದೇಶನಗಳನ್ನು ಸ್ವೀಕರಿಸಿತ್ತು.
ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಮತ್ತು ಗಾಯಕರಾದ ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ, ‘ನಾಟು ನಾಟು’ ಪ್ರಶಸ್ತಿ ಗಳಿಸಿದೆ.
SS ರಾಜಮೌಳಿ, ರಾಮ್ ಚರಣ್, ಜೂನಿಯರ್ NTR ಮತ್ತು MM ಕೀರವಾಣಿ ಎಲ್ಲರೂ ಸಮಾರಂಭದ ದಿನಗಳ ಮೊದಲು ಲಾಸ್ ಏಂಜಲೀಸ್‌ನ ಚೈನೀಸ್ ಥಿಯೇಟರ್‌ಗಳಲ್ಲಿ ಪ್ರಶ್ನೋತ್ತರ ಅಧಿವೇಶನದಲ್ಲಿ ಭಾಗವಹಿಸಿದರು. ಚಿತ್ರದ ಆಸ್ಕರ್ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಕಾರಣ ನಿರ್ದೇಶಕರು ಕಳೆದ ಕೆಲವು ತಿಂಗಳುಗಳಿಂದ LA ನಲ್ಲಿ ನೆಲೆಸಿದ್ದಾರೆ.