ಬಾಲಿವುಡ್ ನಟ ಅನುಪಮ್ ಖೇರ್ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ತನ್ನ ತಾಯಿ ದುಲಾರಿ ಖೇರ್ ಅವರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಆಕೆ ಕೊರೋನ ವೈರಸ್ ಕುರಿತು, ಚಿಕಿತ್ಸೆ ಕುರಿತು ಮಾತನಾಡಿದ್ದಾರೆ. ಕೋವಿಡ್ ಸಂಕ್ರಾಮಿಕ ಮಾನವಕುಲದ ಮೇಲಿನ ದೇವರ ಕೋಪದ ಪರಿಣಾಮೆಂದೂ ಆಕೆ ಹೇಳುತ್ತಾರೆ.
ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಗಾಯಕಿ ಮಂಗ್ಲಿ
ಈ ವಿಡಿಯೊದ ಜೊತೆಗೆ, ಅನುಪಮ್ ಕೂಡ ಒಂದು ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ, ಅಮ್ಮನ ಪ್ರಕಾರ ದೇವರು ಪ್ರಪಂಚದ ಮೇಲೆ ಕೋಪಗೊಂಡಿದ್ದಾನೆ ಮತ್ತು ಅದಕ್ಕಾಗಿಯೇ ಕೋವಿಡ್ 19 ಬಂದಿದೆ, ನಾವು ಒಳ್ಳೆಯವರಾಗಿಲ್ಲ ಹೀಗಾಗಿ ದೇವರು ಶಿಕ್ಷೆ ನೀಡುತ್ತಿದ್ದಾನೆ ಎಂದು ಅವಳು ಭಾವಿಸುತ್ತಾಳೆ. ಅವಳು ತನ್ನದೇ ಆದ ಸಿದ್ಧಾಂತ ಹೊಂದಿದ್ದಾಳೆ ಎಂದೆಲ್ಲ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಕೂಡಲೇ ಅನುಪಮ್ ಇನ್ ಸ್ಟಾ ಖಾತೆಯ ಕಾಮೆಂಟ್ ವಿಭಾಗವು ಪ್ರತಿಕ್ರಿಯೆಗಳಿಂದ ತುಂಬಿ ಹೋಗಿತ್ತು.
https://www.instagram.com/p/CODsCbdF4Vm/