ದೇಹದ ಅಂಗಾಂಗಗಳೆಲ್ಲಾ ನೆಟ್ಟಗಿದ್ದುಕೊಂಡೇ ತಮ್ಮನ್ನು ತಾವು ದುರ್ದೈವಿಗಳು ಎಂದುಕೊಂಡು ಕೊರಗುತ್ತಾ ಕುಳಿತಿರುವವರ ನಡವೆ ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ಅದ್ವಿತೀಯ ಸಾಧನೆಗೈದ ಬಹಳಷ್ಟು ಮಂದಿಯನ್ನು ನೋಡಿದ್ದೇವೆ.
ದೃಷ್ಟಿ ದೋಷವಿದ್ದರೂ ಸಹ ಡಬಲ್ ಕೀಬೋರ್ಡ್ ಅನ್ನು ಯಾವುದೇ ಸಮಸ್ಯೆ ಇಲ್ಲದೇ ನುಡಿಸಬಲ್ಲ ಚೆನ್ನೈನ ಸಹನಾ ಹೆಸರಿನ ಬಾಲಕಿಯೊಬ್ಬಳು ನೆಟ್ಟಿಗರ ಮನ ಗೆದ್ದಿದ್ದಾಳೆ.
ಎ.ಆರ್. ರೆಹಮಾನ್ ರ ತಮಿಳು ಹಾಡಾದ ’ತುಂಬಿ ತುಲಳ್’ಗೆ ಕೀಬೋರ್ಡ್‌ನಲ್ಲಿ ಇನ್‌ಸ್ಟ್ರುಮೆಂಟಲ್ ದನಿಯನ್ನು ನೀಡುತ್ತಿರುವ ಸಹನಾಳ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಈ ಹುಡುಗಿ 2018ರ ಸಾ ರೆ ಗಾ ಮಾ ಪಾ ಲಿಟಲ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ತನ್ನ ಕೀಬೋರ್ಡ್ ಕೌಶಲ್ಯದಿಂದ ಎಲ್ಲೆಡೆ ಜನಪ್ರಿಯತೆ ಗಳಿಸಿಕೊಂಡಿದ್ದಳು.